Tuesday, January 8, 2019

You are reason for your stress


You are the reason for your stress…
A psychologist walked around a room while teaching stress management to an audience. As she raised a glass of water, everyone expected they'd be asked the "half... empty or half full" question. Instead, with a smile on her face, she inquired: "How heavy is this glass of water?"

Answers called out ranged from 8 oz. to 20 oz.

She replied, "The absolute weight doesn't matter. It depends on how long I hold it. If I hold it for a minute, it's not a problem. If I hold it for an hour, I'll have an ache in my arm. If I hold it for a day, my arm will feel numb and paralyzed. In each case, the weight of the glass doesn't change, but the longer I hold it, the heavier it becomes." She continued, "The stresses and worries in life are like that glass of water. Think about them for a while and nothing happens. Think about them a bit longer and they begin to hurt. And if you think about them all day long, you will feel paralyzed – incapable of doing anything."

It’s important to remember to let go of your stresses. As early in the evening as you can, put all your burdens down. Don't carry them through the evening and into the night. Remember to put the glass down!




Monday, January 7, 2019

Live murrel fish treatment of asthama: Challenge to medical world

ಅಸ್ತಮಾ ಕಾಯಿಲೆಗೆ ಮೀನಿನ ಔಷದಿ
ಜಗತ್ತಿನಾದ್ಯಂತ 300 ಮಿಲಿಯನ್ ನಷ್ಟು ಜನ ಅಸ್ತಮಾದಿಂದ ಬಳಲುತ್ತಿದ್ದು, ಪ್ರತೀ ವರ್ಷ 2.5 ಲಕ್ಷ ಜನ ಈ ಕಾಯಿಲೆಯಿಂದ ಸಾಯುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಅಂದಾಜಿಸಿದೆ. ಹಲವಾರು ಅಲೋಪತಿಯ ಔಷದಗಳು ಲಭ್ಯವಿದ್ದರೂ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ, ಅರಿವಿನ ಕೊರತೆ, ಆರ್ಥಿಕ ಮುಗ್ಗಟ್ಟು ಮತ್ತು ಉದಾಸೀನದಿಂದ ಸಾಯುವವರ ಸಂಖ್ಯೆ ಗಣನೀಯವಾಗಿದೆ. ಭಾರತದಲ್ಲಿ ಅನಾದಿ ಕಾಲದಿಂದದಲೂ ಈ ಕಾಯಿಲೆಗೆ ಮನೆಮದ್ದುಗಳಾದ ಲವಂಗ, ಶುಂಟಿ, ಜೇನು, ಈರುಳ್ಳಿ, ಸಾಸಿವೆ ಎಣ್ಣೆ ಮತ್ತು ಇತರೆ ಗಿಡಮೂಲಿಕೆಗಳ ಮದ್ದನ್ನು ಉಪಯೋಗಿಸುವುದು ವಾಡಿಕೆ.  ಆಯುರ್ವೇದದಲ್ಲಿಯೂ ಹಲವಾರು ಸಿದ್ಧಪಡಿಸಿದ ಔಷದಿಗಳು ಲಭ್ಯವಿದೆ. ಆದರೆ ಭಾರತದ ಆಂಧ್ರಪ್ರದೇಶದಲ್ಲಿರುವ ಒಂದು ವಿಶಿಷ್ಟ ಪದ್ಧತಿ ಮಾತ್ರ ವಿಜ್ಞಾನ ಲೋಕಕ್ಕೆ ಸವಾಲಿನಂತಿದೆ. ಅದುವೇ ಜೀವಂತ ಮೀನಿನ ಔಷದ.

ಚಿತ್ರ: ಮರೆಲ್ ಮೀನಿನ ಮರಿಗೆ ಗಿಡಮೂಲಿಕೆಗಳ ಔಷದವನ್ನು ಹಾಕಿ ಅಸ್ತಮಾ ರೋಗಿಗೆ ಜೀವಂತ ತಿನ್ನಿಸುತ್ತಿರುವುದು

ಕರ್ನಾಟಕದಲ್ಲಿ ಮರೆಲ್, ಮಡಂಜಿ ಅಥವಾ ಕಂದು ಎಂದು ಕರೆಯಲ್ಪಡುವ 5-7 ಸೆಂಟಿಮೀಟರ್ ಗಾತ್ರದ ಮೀನುಗಳಿಗೆ ಗಿಡಮೂಲಿಕೆಗಳಿಂದ ತಯಾರಿಸಿದ ಔಷದವನ್ನು ತಿನ್ನಿಸಿ ನಂತರ ಅಸ್ತಮಾ ರೋಗಿಗೆ ಜೀವಂತ ನುಂಗಿಸಲಾಗುತ್ತದೆ. ಹೀಗೆ ಜೀವಂತವಾಗಿ ಅನ್ನನಾಳದ ಮೂಲಕ ಒಳನುಸುಳುವಾಗ kafaವನ್ನು ತೆಗೆಯುತ್ತದೆ ಎಂದು ನಂಬಲಾಗಿದೆ. ಈ ರೋಗವು ಸಂಪೂರ್ಣ ಗುಣವಾಗಬೇಕಾದರೆ ವರ್ಷಕ್ಕೊಮ್ಮೆಯಂತೆ ಮೂರು ವರ್ಷ ತೆಗೆದುಕೊಳ್ಳಬೇಕಾಗುತ್ತದೆ. ಔಷದ ತೆಗೆದುಕೊಂಡ ನಂತರ ಅವರು ತಿಳಿಸುವ ಆಹಾರದ ಪತ್ಯೆಯನ್ನು ಅನುಸರಿಸಬೇಕಾಗುತ್ತದೆ.
ಮೀನಿನ ಸೇವೆನೆ ನಂತರ ಸುಮಾರು 45 ದಿನಗಳ ಕಾಲ ಅನ್ನ, ಮೇಕೆ/ಕುರಿ ಮಾಂಸ, ಸೊಪ್ಪು, ಅಂಜೂರ ಮಾತ್ರ ತಿನ್ನಬೇಕು. ತೀರಾ ಹಸಿವಾದರೆ ಬಿಸ್ಕೇಟ್ ತಿನ್ನಲು ತಿಳಿಸುತ್ತಾರೆ. ಆಂಧ್ರಪ್ರದೇಶದ ಒಂದು ಹಳ್ಳಿಯ ಸಣ್ಣ ಕುಟುಂಬ ತಲತಲಾಂತರದಿಂದ ಈ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಾ ಬಂದಿದೆ. ಇದರ ಹಿನ್ನಿಲೆ ಕೆದಕುತ್ತಾ ಹೋದರೆ, ಇದು ಸುಮಾರು 170 ವರ್ಷಗಳಿಂದ ನೆಡೆಯುತ್ತಿದೆ. 1845 ರಲ್ಲಿ ಹೆಂಡ/ಶೇಂದಿ ಮಾರುತ್ತಿದ್ದ ವೀರಣ್ಣಗೌಡ ಎಂಬ ವ್ಯೆಕ್ತಿಗೆ ಒಬ್ಬ ಅಪರಿಚಿತ ವ್ಯೆಕ್ತಿ ಪರಿಚಯವಾಗಿ, ಈ ಅಸ್ತಮಾ ಕಾಯಿಲೆಯನ್ನು ಗುಣಪಡಿಸುವ ವಿಶೇಷ ಪದ್ಧತಿಯನ್ನು ಕಲಿಸಿಕೊಡುತ್ತಾನೆ. ಆದರೆ ಅವನ ಷರತ್ತೆಂದರೆ ಇದನ್ನು ಅಗತ್ಯ ಇದ್ದವರಿಗೆ ಉಚಿತವಾಗಿ ನೀಡಬೇಕು. ಅಂತೆಯೇ ಇಂದಿಗೂ ‘ಬತಿನಿ ಗೌಡ’ ಮತ್ತು ಕುಟುಂಬ ಪ್ರತೀವರ್ಷ ಜ್ಯೋತಿಷಿಗಳು ತಿಳಿಸಿದ ದಿನ ಹೈದರಾಬಾದ್‍ನಲ್ಲಿ ಔಷದವನ್ನು ನೀಡುತ್ತಿದ್ದಾರೆ. ಇದರ ಖ್ಯಾತಿ ಎಷ್ಟಿದೆ ಎಂದರೆ, ಕಳೆದ ವರ್ಷ 70 ಸಾವಿರಕ್ಕೂ ಜನ ಬರಲಾಗಿ ಹೈದರಾಬಾದ್‍ನ ಒಂದು ಸ್ಟೇಡಿಯಂನಲ್ಲಿ ಔಷದ ನೀಡಲು ವ್ಯವಸ್ಥೆ ಕಲ್ಪಿಸಿ, ಜನರನ್ನು ನಿಯಂತ್ರಿಸಲು poಲೀಸರು ಹೈರಾಣಾಗಿದ್ದಾರೆ ಮತ್ತು ದಿನದ 24 ಗಂಟೆಯೂ ಔಷದಿಗಾಗಿ ಜನ ಸಾಲುಗಟ್ಟಿ ನಿಂತಿದ್ದರು. ಈ ಅವೈಜ್ಞಾನಿಕ ಪದ್ಧತಿಯ ಬಗ್ಗೆ ಹಲವರು ಅಪಸ್ವರವೆತ್ತಿ ಕಂಪ್ಲೇಂಟ್ ನೀಡಲು ಮುಂದಾದರೆ, ಅಲ್ಲಿನ poಲೀಸ್ ಮತ್ತು ನ್ಯಾಯಾಧೀಶರೇ ಈ ಔಷದದ ಫಲಾನುಭವಿಗಳು ಎಂದು ಜನ ತಮಾಷೆ ಮಾಡಿಕೊಳ್ಳುವುದುಂಟು. 
ಹಲವಾರು ದೂರುಗಳ ಮೇಲೆ ಇಂಡಿಯನ್ ಮೆಡಿಕಲ್ ಅಸೋಶಿಯೇಷನ್, ಈ ಔಷದಗಳಲ್ಲಿ ಹಾನಿಕಾರಕ ಅಂಶಗಳಿವೆಯೆ, ಸ್ಟಿರಾಯ್ಡ್‍ಗಳಿರಬಹುದೆ ಮತ್ತು ಇದರಿಂದಾಗುವ ದುಷ್ಪರಿಣಾಮಗಳ ಅಧ್ಯಯನ ನೆಡೆಸಿದಾಗ, ಈ ನಾಟಿ ಔಷದಿಯಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ತಿಳಿದು ಬಂದಿದೆ. ಇದು ವಿಜ್ಞಾನ ಲೋಕಕ್ಕೇ ಸವಾಲಿನ ವಿಷಯ. ಯಾವುದೇ ದುಷ್ಪರಿಣಾಮಗಳಿಲ್ಲದೇ ಉಚಿತವಾಗಿ ಕಾಯಿಲೆ ವಾಸಿಯಾದರೆ ಯಾರಿಗೆ ತಾನೆ ಖುಷಿಯಾಗುವುದಿಲ್ಲ. ಅದೇನೆ ಇರಲಿ ಅಸ್ತಮಾ ಕಾಯಿಲೆ ಇದ್ದವರು ಮತ್ತು ಇಲ್ಲದವರೂ ವಾರಕ್ಕೆ ಎರಡು ಬಾರಿ ಮೀನನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ವಿಜ್ಞಾನವೇ ಒಪ್ಪಿಕೊಂಡಾಗಿದೆ. 

Sunday, January 6, 2019

Interesting characters and incidences of my fisheries college days (1988-92)

ಮೀನುಗಾರಿಕೆ ಮಹಾವಿದ್ಯಾಲಯದ ಇಂಟರೆಸ್ಟಿಂಗ್ ಕ್ಯಾರೆಕ್ಟರ್‍ಗಳು ಮತ್ತು ಕೆಲವು (ಅಧಿಕ) ಪ್ರಸಂಗಗಳು

ನಾನು ಇಂಗ್ಲೀಷಿನಲ್ಲಿ ಪುಸ್ತಕ ಬರೆಯಬೇಕು ಅನ್ಕೊಂಡಿದ್ದೀನಿ ಅಂತ ಅಶೋಕನಿಗೆ ಹೇಳಿದೆ. ಬರೀರಿ, ನೀವು ಬರೀಬೇಕು, ಉತ್ತಮವಾಗಿ ಬರೆಯಬಲ್ಲಿರಿ..ಬರೀಲೇಬೇಕು..ಆದರೆ, ಮೊದಲು ಕನ್ನಡದಲ್ಲಿ ಬರೀರಿ ಅಂತ Fiನಲ್ ಜಡ್ಜ್‍ಮೆಂಟ್ ಕೊಟ್ಟೇಬಿಟ್ಟ. ಅಶೋಕ ನನಗಿಂತ ಕಿರಿಯ, ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಸಹಪಾಟಿ. ಮನಸ್ಸಿಗೆ ಅನ್ನಿಸಿದ್ದನ್ನು ನಿಖರವಾಗಿ, ಖಡಕ್ಕಾಗಿ ಮತ್ತು ಮುಗ್ದವಾಗಿ ಹೇಳಿಬಿಡಬಲ್ಲವನಾಗಿದ್ದ. ಅದ್ಯಾವ ಜನ್ಮದಲ್ಲಿ ಕನ್ನಡದಿಂದ ಅದ್ಯಾವ ಪರಿ ಮೋಸ ಆಗಿತ್ತೋ..ಕನ್ನಡ ಅಂದ್ರೆ, ಕಾಣದ ಮೂಲೆಗೆ ಖಾರ ಸೋಕಿದ ಹಾಗೆ ಆಡುತ್ತಿದ್ದ ಸುಬ್ಬಿ ‘ಇಂಗ್ಲೀಷಿನಲ್ಲಿ ಬರೀರಿ..ಜಗತ್ತನ್ನು ತಲುಪಿ..ಬ್ಲಡಿ ಲೋಕಲ್ feಲೋಸ್. ಕುವೆಂಪು ಅವರು ಹೇಗೆ ಬರೀತಿದ್ರು. ಭೈರಪ್ಪನೋರು ಎಷ್ಟು ಚನ್ನಾಗಿ ಬರೀತಾರೆ, ಆದ್ರೆ, ದೇಶದ ಆಚೆಗೆ ನಾಲ್ಕು ಜನಕ್ಕೆ ಗೊತ್ತಿಲ್ಲ. ಗೊತ್ತಿದ್ರು..ಅದು ನಮ್ಮವರಿಗೆ ಮಾತ್ರ. ಅದೇ ಶೇಕ್ಸ್‍ಪಿಯರ್, ಪೌಲ್ ಸಿಯಾಲೋ..ದಸ್ತೊವಸ್ಕಿ, ಟಾಲ್‍ಸ್ಟಾಯ್..’ ಹಾಗನ್ನುತ್ತಿದ್ದವನೇ ತನ್ನ ಕಪಾಟಿನಿಂದ ಒಂದು ಇಂಗ್ಲೀಷ್ ಪುಸ್ತಕ ತಂದು ಕೊಟ್ಟ. ಅವನು ಹಾಗೆ ಎಷ್ಟೋ ದುಬಾರಿ ಪುಸ್ತಕಗಳನ್ನ ನನಗೆ ನೀಡಿದ್ದಾನೆ. ನಾನೂ ಕೂಡ ಓದಿದ ನಂತರ ಇತರರಿಗೆ ನೀಡಿದ್ದೇನೆ. 
ನಾನೂ ಕೂಡ ಇಂಗ್ಲೀಷನ್ನ ಪಾಟ ಮಾಡೋಕೆ ಅಗತ್ಯ ಇರೋವಷ್ಟು ತಿಳ್ಕೊಡಿದ್ದೆ. ಕನ್ನಡ ನನ್ನ ವಲಯದಲ್ಲಿ, ಇತರೆ ಸಹಪಾಟಿಗಳಿಗಿನ್ನ ಸ್ವಲ್ಪ ಚನ್ನಾಗಿತ್ತು. ಇಂಗ್ಲೀಷಿನ ಗ್ರಾಮರ್ ಎಷ್ಟೇ ಕೆಟ್ಟದಾಗಿದ್ರು, ಎದುರಿಗಿದ್ದವರಿಗೆ ನಾನು ಏನನ್ನು ಹೇಳಲು ಹೊರಟಿದ್ದೆನೋ ಅದನ್ನು ಸರಿಯಾಗೇ ಅರ್ಥ ಮಾಡಿಸುತ್ತಿದ್ದೆ. ಬರವಣಿಗೆ ಮಾತಿಗಿನ್ನ ಉತ್ತಮವಾಗಿತ್ತು. ಆದರೂ ಅಶೋಕ ಜಡ್ಜ್‍ಮೆಂಟ್ ಕೊಟ್ಟ ಮೇಲೆ ಐವತ್ತು ಪುಟಗಳಷ್ಟು ಬರೆದಿದ್ದ ಇಂಗ್ಲೀಷ್ ಅವತರಿಣಿಕೆಯನ್ನು ಮುಚ್ಚಿಟ್ಟು ಕನ್ನಡ ಶುರುವಿಟ್ಟುಕೊಂಡೆ. ಆಗಲೇ ಅನಿಸಿದ್ದು, ನನ್ನ ಪುಸ್ತಕದ ಹೆಸರಿಗೂ, ಅದರ ಆಶಯಕ್ಕೂ, ನಾನು ತೆಗೆದುಕೊಂಡ ನಿರ್ಧಾರ ಸರಿಯಿದೆ. ಇದೇ ನನ್ನ ಆಶಯಕ್ಕೆ ಸಿಕ್ಕ ಮೊದಲ ಜಯ. ನನ್ನ ನ್ಯೂನತೆ ಇಂಗ್ಲೀಷ್. ಅದರ ಜೊತೆ ಬದುಕುವುದು ಹೇಗೆ. ಇಂಗ್ಲೀಷ್ ಇಲ್ಲದೇ ಬದುಕಬಲ್ಲೆನೆ..ಅಥವಾ ಅದಕ್ಕೆ ಬೇರೆ ಪರಿಹಾರ ಇದೆಯೇ? ನಾನು ಕಪ್ಪು, ಕುಳ್ಳು, ದಪ್ಪ, ಹಲ್ಲುಬ್ಬು, ಗಿಡ್ಡ ಕೂದಲು, ಸಂಬಳ ಕಡಿಮೆ-ಬಡವ, ಸಣ್ಣ ಮನೆ, ಅವಿದ್ಯಾವಂತ, ಒಂದೇ..ಎರಡೇ, ಸಮಸ್ಯೆಗಳು ಸಾವಿರ. ಹುಡುಕುತ್ತಾ ಹೋದರೆ, ಪರಿಹಾರಗಳು ಸಾವಿರ.

ಸಮಸ್ಯೆಗಳು ಮತ್ತು ನಾವು
ಸಮಸ್ಯೆಗಳಿಲ್ಲದ ಜೀವನವನ್ನು ಬಯಸುವುದೇ ತಪ್ಪು. ಕಷ್ಟಗಳು ಮನುಷ್ಯರಿಗಲ್ಲದೆ ಮರಕ್ಕೆ ಬರುತ್ಯೆ...ಅಂತ ಯಾವನು ಹೇಳಿದನೋ..ಮೂರ್ಖ. Funಗಸ್ಸು, ಬ್ಯಾಕ್ಟೀರಿಯಾಗೂ ಬರುತ್ತೆ...ಮರಕ್ಕೂ ಬರುತ್ತೆ. ಬಂದಿತ್ತಲ್ಲ ತೆಂಗಿಗೆ ನುಸಿರೋಗ. ಮನುಷ್ಯನ ಜೀವನ ಸಾರ್ಥಕತೆಯನ್ನು ತಲುಪೆದೆ ಆ ಕಷ್ಟಗಳನ್ನು ಅನುಭವಿಸಿ ಗಮ್ಯ ತಲುಪಿದಾಗ. ಶುದ್ಧ proಟೀನು, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬನ್ನು ಸೇವಿಸಿದರೆ, ಮನೆಯಲ್ಲಿ ಟಾಯ್ಲೆಟ್ಟಿನ ಅಗತ್ಯವೇ ಇರೋದಿಲ್ಲ. ಮಲಬದ್ಧತೆಯಿಂದ ಸತ್ತೋಗ್ತೀವಿ.  ಇರಬೇಕು Fiಬರ್, ಆಗಲೇ ಜ್ಞಾನಪೀಟದ ಮೇಲೆ ಎಲ್ಲಾ ಸರಾಗ. ಯಾವುದೇ ಪ್ರತಿಫಲ ಪಡೆಯಬೇಕಾದರು, ಅದಕ್ಕೆ ಸರಿಯಾದ ಬೆಲೆ ತೆರಲೇಬೇಕು. ಶ್ರಮ ಇಲ್ಲದೇ ತಂದೆ ಆಗಬೇಕು ಅಂತ ಪ್ರೆಗ್ನೆಂಟ್ ಹುಡುಗೀನ ಮದುವೆ ಆಗೋಕಾಗುತ್ತಾ. ಬೆಳಿಗ್ಗೆ ಏಳುತ್ತಲೇ ಬೈಕೊಂಡೂ ಎದ್ದ ಅಣ್ಣಪ್ಪ ‘ಛೇ..ಎಂಥಾ ಮಳೆ ಮಾರಾಯ್ರೆ..ಎಲ್ಲೂ ಹೋಗೋಕಾಗಲ್ಲ’. ಬಸ್ ಸ್ಟಾಂಡಿನಲ್ಲಿ ಗೊಣಗುತ್ತಿರುವವನ ಮುಂದೆಯೇ ನೂರಾರು ಜನ ಅವರವರ ಪಾಡಿಗೆ ಹೋಗುತ್ತಿರುತ್ತಾರೆ. ಸ್ಕೂಲ್ ಮಕ್ಳು, ಪೇಪರ್ರು..ಹಾಲು ಹಾಕೋರು, ಕೆಲಸಕ್ಕೆ ಹೋಗೋ ಗೃಹಿಣಿಯರು, ಗಂಡಸರು...ಕೊನೆಗೆ ಹಕ್ಕಿ ಪಕ್ಷಿಗಳು ಎಲ್ಲರೂ..ಎಲ್ಲವೂ ಅವರವರ ಪಾಡಿಗೆ, ಅದೇ ಮಳೆಯಲ್ಲೆ..ಹೋಗುತ್ತಿದ್ದಾರೆ. ನಮ್ಮ ಅಣ್ಣಪ್ಪಸ್ವಾಮಿಗೆ ಮಾತ್ರ..ಮಳೆ ಒಂದು ಜಾಗತಿಕ ಸಮಸ್ಯೆ. ಆಫಿಸಿಗೆ ಲೇಟಾಗಿ ಬರೋದ್ರಿಂದ ಹಿಡಿದು ಮಾಡಿದ ಎಲ್ಲಾ ತಪ್ಪಿಗೂ ಮಳೆಯನ್ನೇ ದೂಷಿಸುತ್ತಾನೆ. Of course-ಬೇಸಿಗೆಯಲ್ಲಿ ಸೆಖೆಗೆ. ಅವನು ಎದುರಿಗೆ ಸಿಕ್ಕರೆ ನಮ್ಮ ಕೆಲಸ ಹಾಳು, ಶೇಕ್‍ಹ್ಯಾಂಡ್ ಕೊಟ್ರೆ ಮುಗಿದೇಹೋಯ್ತು ಅಂತ ಅದ್ಯಾವನು ಸುದ್ದಿ ಹಬ್ಬಿಸಿದನೋ, ಒಂದು ಕಾಲಕ್ಕೆ ಎಲ್ಲರೂ ಅಣ್ಣಪ್ಪನಿಗೆ ಹೆದರುವವರೆ. ಸೆಮಿನಾರ್ ನೀಡಲು ಭರ್ಜರಿ ತಯಾರಿ ನೆಡೆಸಿದ್ದ ಅತ್ನೂರ್ ಬೆಳ್ಳಂಬೆಳಗ್ಗೆ ನೆಡೆದು ಬರುವಾಗ ಅಣ್ಣಪ್ಪ ಸಿಕ್ಕು ಕೈಕೊಟ್ಟಿದ್ದ. ಆ ದಿನ ಅತ್ನೂರಿನ ಸೆಮಿನಾರ್ ಫ್ಲಾಪ್ ಆಯಿತು. ಬಹಳ ಅಪ್ ಸೆಟ್ ಆಗಿ ಯೋಚಿಸತೊಡಗಿದ. ಆಗ ನೆನಪಾಯಿತು ಬೆಳಿಗ್ಗೆ ಸಿಕ್ಕ ಅಣ್ಣಪ್ಪ, ಆದರೆ ಮರೆತೇ ಹೋಗಿತ್ತು ಮಂಗಳ ಬಾರಿನಲ್ಲಿ ತೆಗೆದುಕೊಂಡ ಸತ್ಯನಾರಯಣ ಪೂಜೆಯ ತೀರ್ಥ. ಆ ಸಿಟ್ಟಿನಲ್ಲಿ ಈ ಪರಿ ಅಣ್ಣಪ್ಪನನ್ನು ಹೀರೋ ಮಾಡಿದ್ದು ಇವನೆ.
ವಿಜಯ್ ಅತ್ನೂರ್
ಇವನ ಬಗ್ಗೆ ಹೆಳೋಕೆ ಹತ್ತು ಪುಸ್ತಕ ಬರೆಯಬಹುದು. ಅವನ ಆಕಾರ, ಡ್ರೆಸ್‍ಕೋಡ್ ವಿಚಿತ್ರ- ಆದರೆ ಹಾಸ್ಯ ಮಾಡುವ ಟೈಮಿಂಗ್ಸ್ ಅದ್ಭುತ. ಮಂಗಳೂರಿನಲ್ಲಿ ನೀರು ಸರಿಇಲ್ಲ ಅಂತ ನೀರೇ ಕುಡಿಯುತ್ತಿರಲಿಲ್ಲ. ಅದ್ಯಾಗೆ ಅವನನ್ನು ಮೈಕ್ರೋಬಯಾಲಜಿ ಡಿಪಾರ್ಟ್‍ಮೆಂಟಿನಲ್ಲಿ ಸಹಿಸಿಕೊಂಡರೋ ದೇವರಿಗೇ ಗೊತ್ತು. ಅವನು ತಮಾಷೆಗೆ ರೇಗಿಸುತ್ತಿದ್ದ ಪರಿ ಹೇಗಿತ್ತೆಂದರೆ, ಒಮ್ಮೆ ಹಾಸ್ಟೆಲಿನ ಭಾನುವಾರದ ಮಧ್ಯಾಹ್ನದ ಊಟಕ್ಕೆ ಚೈತನ್ಯನ ಎದುರುಗಡೆ ಕುಳಿತ. ಅರ್ಧ ಗಂಟೆಯ ನಂತರ, ಚೈತನ್ಯ ಅವರೆ ನಮಸ್ಕಾರ ಅಂದ. ‘ಅರ್ಧ ಗಂಟೆಯಿಂದ ಇಲ್ಲೇ ಕುಳಿತಿದ್ದೀಯ...ಈಗ ನಮಸ್ಕಾರ ಮಾಡ್ತೀಯ’ ಎಂದು ಚೈತನ್ಯ ಕೇಳಿದಾಗ ‘ಕ್ಷಮಿಸಿ. ನಿಮ್ಮ ತಟ್ಟೆಯಲ್ಲಿದ್ದ ಅನ್ನ ಅಡ್ಡ ಇತ್ತು, ನೀವು ಕಾಣಲಿಲ್ಲ’ ಅಂದಿದ್ದ. ಮತ್ತೊಮ್ಮೆ ಅವನ ತಟ್ಟೆ ನೋಡಿ, ಸಾರ್ ಇಲ್ಲಿ ರೈಸ್ ಬೇಸಿನ್ ಯಾವುದು’ ಅಂತ ಕೇಳಿ ಆ ಪರಿ ತಿನ್ನುತ್ತಿದ್ದ ಚೈತನ್ಯನನ್ನು ಕಂಗಾಲು ಮಾಡಿದ್ದ. 
ಬಹಳ ವರ್ಷಗಳ ನಂತರ ಕಾಲೇಜಿಗೆ ಹೋಗಿದ್ದಾಗ ಕ್ಯಾಂಪಸ್ಸಿನಲ್ಲಿ ಸಿಕ್ಕ ಅತ್ನೂರ್ ಮನೆಗೆ ಕರ್ಕೊಂಡ್ ಹೋಗಿದ್ದ. ಮದುವೆ ಆಗಿತ್ತು. ಅವರಮ್ಮ ಅವನ ಮನೆಯಲ್ಲೇ ಇದ್ದರು. ನಾನು ಮನೆಗೆ ಎಂಟ್ರಿ ಕೊಟ್ಟ ತಕ್ಷಣ, ಕೆಲವು ಕ್ಷಣ ಮರೆಯಾಗಿ, ಶುಭ್ರವಾಗಿ ಪಂಚೆಯುಟ್ಟು, ಹಣೆಗೆ ವಿಭೂತಿಯಿಟ್ಟು ಬಂದವನೆ ನನ್ನ ಕಾಲಿಗೆರಗಿದ. ನನ್ನನ್ನು ಕೇಳದೆ, ಅವರಮ್ಮನ ಕಡೆ ತಿರುಗಿ, ನಮ್ಮ ಗುರುಗಳು ಹಾಡುತ್ತಾರೆ ಅಂದ. ಒಂದೆರಡು ಹಾಡಿದ ಮೇಲೆ ಹತ್ತಿರ ಬಂದು ಅಪ್ಪಿಕೊಂಡ. ನೀರು ಕುಡಿಯಲು ಆರಂಭಿಸಿದ್ದಾನೆ ಅನ್ನಿಸಿತು. ಒಳ್ಳೆಯ ಅಭ್ಯಾಸಗಳ ಬಗ್ಗೆ ನನಗೇ ಭಾಷಣ ಬಿಗಿದ. ಕೆಲ ವರ್ಷಗಳ ನಂತರ ಬೀದರ್‍ನಲ್ಲಿ ಸಿಕ್ಕ. ಖುಷಿಯಿಂದ ಅಪ್ಪಿಕೊಳ್ಳಲು ಮುಂದಾದಾಗ ಪಾನ್‍ಪರಾಗ ಬಣ್ಣದ ಹಲ್ಲು ಕಿರಿದು ಹಿಂದೆ ಸರಿದ. ನಾನೇ ಹತ್ತಿರ ಹೋಗಿ ‘ಇವತ್ತಿನ ಇಂಟರ್‍ವ್ಯೂಗೆ ಒಳ್ಳೆಯದಾಗಲಿ, ತೀರ್ಥ ಸ್ವಲ್ಪ ಕಡಿಮೆ ಮಾಡು’ ಅಂದೆ. ಎಂದಿನಂತೆ... ‘ಕೆಲಸ ಸಿಕ್ಕ ಕೂಡಲೇ...’ ಅಂದ. ಅದೃಷ್ಟವಶಾತ್ ಕೆಲಸ ಸಿಕ್ಕಿತು. 

ಗಜೇಂದ್ರ
ತೊಂಬತ್ತೈದನೇ ಇಸವಿಯಲ್ಲಿ ನಾನು ಕ್ಯಾನಿಂಗ್ ಇನ್‍ಸ್ಟ್ರಕ್ಟರ್ ಆಗಿದ್ದಾಗ ಒಂದು ಸಣ್ಣ ಲಾಂಗು ತೋರಿಸಿ ‘ಕ್ವೊಶ್ಚನ್ ಪೇಪರ್ ಕೊಡು, ಇಲ್ಲಾ ಅಂದ್ರೆ ನಾಳೆ ಬೆಳೆಗ್ಗೆ ಟೌನ್‍ಹಾಲ್ ಮುಂದೆ ನಿನ್ನ ಹೆಣ ಬಿದ್ದಿರುತ್ತೆ’ ಹಾಗಂತ ಖಡಕ್ಕಾಗಿ ಹೇಳಿದವನು ಗಜೇಂದ್ರ. ತಾಕತ್ತಿದ್ದರೆ ಹಾಗೇ ಮಾಡು ಎಂದವನೇ ಹೊರನಡೆದೆ. ಅದೊಂದು ಬಿ-ಗ್ರೇಡ್ ಬಂದಿದ್ದರೆ ಡಿಗ್ರಿ ಮುಗಿಸಿ ಬಿಡುತ್ತಿದ್ದ. ಅವನಿಗೆ ಡಿ-ಗ್ರೇಡ್ ಬಂತು. ಅದೊಂದೆ ಕೋರ್ಸ್‍ನಿಂದ ಡಿಗ್ರಿ ಮುಗಿಯಲಿಲ್ಲ. ನಮ್ಮೂರು, ನಮ್ಮ ಜಾತಿ ಅಂತ ನನಗನ್ನಿಸಲೇ ಇಲ್ಲ. ಶಿಕ್ಷಕನ ಘನತೆಯನ್ನು ಎತ್ತಿ ಹಿಡಿಯುವುದೇ ನನ್ನ ಉದ್ದೇಶವಾಗಿತ್ತು. ಇತ್ತೀಚೆಗೆ ಪಕ್ಷಪಾತ ಮಾಡ್ತಿರೋ, ವಿದ್ಯಾರ್ಥಿಗಳ ಆತ್ಮಗೌರವಕ್ಕೆ ಧಕ್ಕೆ ತರುತ್ತಿರುವ, ಬ್ಲಾಕ್‍ಮೈಲ್ ಮಾಡುತ್ತಿರುವ ಎಳಪೆ ಮೇಷ್ಟ್ರುಗಳನ್ನು ಕಂಡರೆ ಮೈಯಲ್ಲಾ ಉಕ್ಕಿ ಬರುತ್ತೆ. ಅವರನ್ನೆಲ್ಲ ರಿಪೇರಿ ಮಾಡುವ ಗುರುತರ ಜವಬ್ದಾರಿ ನನ್ನ ಮೇಲಿದೆ. ಬಹುಶ: ನಲವತ್ತ ನಾಲ್ಕು ವರ್ಷಗಳ ಇತಿಹಾಸದಲ್ಲಿ ಅವನೊಬ್ಬನನ್ನೇ ‘ನಾಟ್ ಫಿಟ್ far ಟೆಕ್ನಿಕಲ್ ಕೋರ್ಸ್’ ಅಂತ ಕಾಲೇಜು ತೆಗೆದು ಹಾಕಿದ್ದು. ಮತ್ತೆ ನನ್ನ ಹತ್ತಿರ ಬಂದು ‘ಬೋರ್ಡ್ ಮೆಂಬರ್ ಆಗಿ ಬಂದು ನಿನ್ನನ್ನ ಸಸ್ಪೆಂಡ್ ಮಾಡ್ತೀನಿ’ ಅಂದ. ಚನ್ನಾಗಿ ಹಾಡ್ತಿದ್ದ, ಸ್ಮಾರ್ಟ್ ಆಗಿ ಕೂಡ ಇದ್ದ. ಅವನಿಗಿದ್ದ ಲಾಂಛನಗಳಾದ ಉಡಾfeತನ ಮತ್ತು ಅಭ್ಯಾಸಗಳಿಂದ ಜಗತ್ತಿನ ಎಲ್ಲಾ ಖಾಯಿಲೆಗಳನ್ನು ತಂದುಕೊಂಡ. ಮಂಗಳೂರಿನ ಫಾತಿಮ ಆಸ್ಪತ್ರೆಯಲ್ಲಿ ಸಾಯುವಾಗಲೂ ‘ಟೈಗರ್ ಹೇಗೆ ಬಿದ್ದಿದೆ ನೋಡು ಶಿವು, ಕೆಲಸಕ್ಕೆ ಬಾರದೆ ಇರೋ ಕ್ಯಾನಿಂಗ್‍ನಿಂದ ನನ್ನ ಜೀವನವೇ ಹಾಳಾಯ್ತು. ನಿನ್ನನ್ನ, ಮರಗಲ್‍ನ ಕ್ಷಮಿಸಿದ್ದೀನಿ. ಚನ್ನಾಗಿರಿ’ ಅಂದ. ನಾವೇನೋ ಚನ್ನಾಗಿದ್ದೀವಿ. ಅವನೇ ಇಲ್ಲ.  

ಹಂಚಿ ತಿನ್ನುವ ರೋಗ
ಅವನು ಅಪರೂಪಕ್ಕೆ phone ಮಾಡಿದ ಅಂದ್ರೆ ಅವನು ಯಾವುದೋ ಹುಳುವನ್ನು ತಲೆ ಬಿಟ್ಕೊಂಡಿದ್ದಾನೆ ಅಂತಲೇ ಅರ್ಥ. ಕಾಲೇಜಿನೆಲ್ಲಿ ಪಾಟ ಮಾಡೋ ಮೇಷ್ಟ್ರು. ಯಾರ ತಂಟೆಗೂ ಹೋಗದ ಅಥವಾ ಹಾಗಂದುಕೊಂಡಿದ್ದ ನಿರುಪದ್ರವಿ. ಅವನು ಯಾವುದೋ ಸಮಸ್ಯೆಗೆ ಬಿದ್ದು, ಬೇಜಾರಾಗಿ, phone ಮಾಡ್ದ ಅಂದ್ರೆ ಕೇಳುತ್ತಿರುವವನಿಗೆ ಬೇಕೆಬೇಕು ಅಮೃತಾಂಜನ್. ಕೆಲವರು ಹಾಗೆನೆ, ಅಗತ್ಯಕ್ಕಿನ್ನ ಜಾಸ್ತಿ ಕೆರ್ಕೊಂಡ್ ಬಿಡ್ತಾರೆ. ಆಗಲೇ ಆಗೋದು ಸೆಪ್ಟಿಕ್. ಅವರಿಗಷ್ಟೆ..ಮಾಡ್ಕೊಳಲ್ಲ..ಅಕ್ಕಪಕ್ಕದವರಿಗೂ ಹಂಚಿ ಅದೇ ಗುಂಗಿನಲ್ಲಿ ವಾರ ತಿಂಗಳುಗಟ್ಟಲೇ…ಕುಂತರೂ..ನಿಂತರೂ ಅದೇ ಧ್ಯಾನ. ಆ ಸಮಸ್ಯಯನ್ನು ತಮ್ಮ ತಲೆಯಿಂದ ತೆಗೆಯಲಾರರು..ಮತ್ತೊಂದು ಹೊಸ ಸಮಸ್ಯೆ ಬರುವ ತನಕ. 
ಮೈಮ್ ಮತ್ತು ನಾನು
ಎಂಬಂತ್ತೆಂಟನೇ ಇಸವಿಯಲ್ಲಿ ಮೈಮ್ ಸ್ಪರ್ಧೆಗೆ ಆಯ್ಕೆ ನೆಡೆದಿತ್ತು. ನಮಗೆ ಡಾ. ರಾಧಕೃಷ್ಣನ್ ಅವರು ಡೈರೆಕ್ಟ್ ಮಾಡುತ್ತಿದ್ದರು. ಅದ್ಭುತ ಇಂಗ್ಲೀಷ್, ಅದ್ಭುತ ಫಿಲಾಸಫಿ. ಯಾವುದನ್ನು ಪಾಲಿಸುತ್ತಿರಲಿಲ್ಲ ಅಷ್ಟೆ. ಮೈಮ್‍ಗೆ ನಾವು ಆಯ್ಕೆ ಮಾಡಿಕೊಂಡಿದ್ದ ವಿಷಯ ‘ಈವ್‍ಟೀಸಿಂಗ್’. ಆ ಮೇಷ್ಟ್ರು ಇಂಗ್ಲೀಷ್ ಚನ್ನಾಗಿ ಬಲ್ಲವರನ್ನೇ ಕೂಡಿ ಹಾಕಿಕೊಂಡು ಕತೆ ಹೇಳುತ್ತಿದ್ದರು. ಆಗ ಅಲ್ಲಿಗೆ ಎಂಟ್ರಿ ಕೊಟ್ಟವನೆ ‘ಮೈಮ್‍ಗೆ ಇಂಗ್ಲಿಷ್ ಯಾಕೆ ಬೇಕು, ಸ್ವಲ್ಪ ನನ್ನ ಆಕ್ಟಿಂಗ್ ನೋಡಿ ಅಂದೆ’. ‘ಓಕೆ, ಡೂ ಇಟ್’ ಅಂದರು. ನನ್ನ ಆಕ್ಟಿಂಗ್ ಮೆಚ್ಚಿ ನನ್ನನೇ ಲೀಡ್ ರೋಲ್ ಮಾಡಲು ಹೇಳಿದರು. ಕೊನೆಗೆ ನಾನು ಮೈಮ್‍ನಲ್ಲಿ ಸೌತ್-ಜೋನ್ವರೆಗೂ ಹಲವಾರು ಬಾರಿ ಹೋಗಿ ಬಂದಾಯಿತು. ಆ ಕಾಲಕ್ಕೆ ನನಗೆ ಸ್ಟಾರ್‍ಪಟ್ಟ ಕೊಟ್ಟಿತ್ತು ಮೈಮ್. ಆ ವ್ಯೆಕ್ತಿಯ ಕುಕ್ಕುಲತೆ ಮತ್ತು ಅಹಂಕಾರಗಳು ಅವರು ರಿಟೈರಾಗುವ ಹೊತ್ತಿಗೆ ಅವರನ್ನು ತಿಂದು ಹಾಕಿದ್ದವು. ನಮ್ಮ ವ್ಯೆವಸ್ಥೆಯೂ ಅಷ್ಟೆ, ತೀರಾ ಸೆಪ್ಟಿಕ್ ಆಗೋವರೆಗೂ ತಲೆ ಕೆಡೆಸಿಕೊಳ್ಳುವುದಿಲ್ಲ. ಕೇವಲ ಇಂಗ್ಲೀಷ್ ಮತ್ತು ಆರ್ಟಿಕ್ಯುಲೇಷನ್‍ಗಳಿಂದ ಜಗತ್ತನ್ನು ಬದಲು ಮಾಡೋಕ್ಕಾಗಲ್ಲ. ಅದನ್ನೇ ಬಂಡವಾಳ ಮಾಡಿಕೊಂಡ ಅನೇಕ ಜನ ಈಗಲೂ ಇದ್ದಾರೆ. ಬದಲಾಗುವ ಕಾಲದೊಂದಿಗೆ ಬದಲಾಗದಿದ್ದರೆ, ಆಗುವ ಅನಾಹುತವೇ ಅವರಿಗೂ ಆಯಿತು. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೋತರ ಚನ್ನಾಗಿದ್ದಾರೆ. ಯಾಕಂದ್ರೆ, ಅವರಿಗೇ ಮೀಸೇನೆ ಇರಲಿಲ್ಲ. 

ಆರ್ಡಿನರಿ ಹುಡುಗಿಯೂ ಮತ್ತು ಅವಳ ಸಿಟ್ಟೂ..
ಸುಮಾರು ಮೂವತ್ತು ನಲವತ್ತು ಜನ ಹೆಣ್ಣು ಮಕ್ಕಳು ನನ್ನ ರೂಮಿಗೆ ಬಂದರು. ಅವರದು ಒಂದೇ ರೋಧನೆ. ವಾರ್ಡನ್ ಕಿರುಕುಳ. ಅವರು ಹೇಳುವ ಪ್ರಕಾರ ಅದು ವರ್ಚ್ಯೂವಲಿ ರಾಗಿಂಗ್. ಅವರನ್ನು ಸಮಾಧಾನ ಪಡಿಸಿ ಕಳುಹಿಸಿದೆ. ಸಮಸ್ಯೆ ಎಲ್ಲರಿಗೂ ಗೊತ್ತು. ಎಲ್ಲರಿಗೂ ಒಳ್ಳೆಯವರಾಗುವ ಚಟ. ಅವರು ಸ್ಪಂದಿಸುವುದಿಲ್ಲ. ಪಕ್ಕದಲ್ಲಿ ಏನೇ ಆದರೂ ತಲೆ ಕೆಡೆಸಿಕೊಳ್ಳುವುದಿಲ್ಲ. ‘ನೀವು ಚನ್ನಾಗಿ ಓದದಿದ್ದರೂ ಪರವಾಗಿಲ್ಲ. ಪ್ರಶ್ನಿಸುವುದನ್ನು ಕಲಿಯಿರಿ. ಪ್ರಶ್ನೆಗಳೇ ಜಗತ್ತನ್ನು ಬದಲಾಯಿಸಿರುವುದು-ಉತ್ತರಗಳಲ್ಲ’ ಎಂದು ಹೇಳಿ ಕಳುಹಿಸಿದೆ. ಮಾರನೆಯ ದಿನ ತೀರಾ ಮುಗ್ದ ಸ್ವಭಾವದ ಹುಡುಗಿ ಅಳುತ್ತಾ ನನ್ನ ಚೇಂಬರಿಗೆ ಬಂದಳು. ಬಂದವಳೇ ‘ಸಾರ್, ಟೀಚರ್ ಆಗಿ ಆಯಮ್ಮ ಕೇಳೋ ಪ್ರಶ್ನೆಗೆ...’ ಒಂದೇ ಸಮನೆ ಸಂಸ್ಕೃತದಲ್ಲಿ ಅಳುತ್ತಾ ಮಾತನಾಡುತ್ತಿದ್ದರೆ, ‘ಶಹಬ್ಬಾಸ್.. ನೀನೆ ಈ ಕಾಲೇಜಿನ ಗಂಡಸು, ಈಗ ಹೊರಡು ಜಗತ್ತು ವಿಶಾಲವಾಗಿದೆ’ ಅಂದೆ. ಹೊರಡುವಾಗ ನಗ್ತಾ ಹೋದಳು. ಆಗ ನೆನಪಾಯಿತು ‘ವರ್ಲ್ಡ್ ಇಸ್ ಕ್ರುಯೆಲ್ ನಾಟ್ ಬಿಕಾಸ್ ಆf ವಯಲೆನ್ಸ್ ಅf ಬ್ಯಾಡ್ ಪೀಪಲ್-ಇಟ್ ಈಸ್ ಬಿಕಾಸ್ ಅf ಸೈಲೆನ್ಸ್ ಅf ಗುಡ್ ಪೀಪಲ್’. ನನಗೆ ಈ ಊರ ಉಸಾಬರಿ ಎಲ್ಲಾ ಬೇಕಿಲ್ಲ. ಆದರೆ ನನ್ನ ಕಿವಿಗೆ ಬಿದ್ದಾಗಿದೆ. ಆ ಹುಡುಗಿಗಿರೊ ಸಿಟ್ಟಾದ್ರು ನಮ್ಗೆ ಬೇಡ್ವೆ. 
ಸದಾ ನೆನಪಿನಲ್ಲಿರುವ ಕೆಲವು (ಅಧಿಕ) ಪ್ರಸಂಗಗಳು
ಕಾಲೇಜಿಗೆ 1988 ರ ಡಿಸೆಂಬರ್ 17 ನೇ ತಾರೀಖು ಊರಿಂದ ಒಬ್ಬನೇ ಬಂದು ಎರಡೆರಡು ಬಸ್ಸು ಹಿಡಿದು ಎಕ್ಕೂರು ತಲುಪಿ ಕಾಲೇಜಿನ ಗೇಟ್‍ನ ಒಳಗೆ ಹೋದೆ. ಆಗ ಎದುರಾದವನೆ ರಮೇಶ ಆಲಿಯಾಸ್ ಟೆನ್ಸನ್ ರಮೇಶ. ಸೂಟ್ ಕೇಸ್ ತಲೆಮೇಲೆ ಈಟ್ಟುಕೊಳ್ಳಲು ಹೇಳಿದ. ಅವನು ಟೀ ಕುಡಿದಾದ ಮೇಲೆ ಇನ್ನೊಬ್ಬ ಅಯೋಗ್ಯನ ಬಳಿ ಕರೆದುಕೊಂಡು ಹೋದ. ಅವನೇ ರಾಜೇಶ. ಜೂನಿಯರ್ಸ್ ಮೀಸೆ ಬೋಳಿಸೋದು ಕಂಪಲ್ಸರಿ. ಆದ್ರೆ ನನಗೆ ಮೀಸೇನೆ ಇರಲಿಲ್ಲ. ಅದಕ್ಕವನು ಪೆಗದಸ್ತಾಗಿ ಬೆಳೆದೆ ಕಣ್ಣುಹುಬ್ಬು ಬೋಳಿಸಲು ಹೇಳಿದ. ನಾನು ಅಳುತ್ತಲೇ ಹೊರಬಂದೆ. ಎದುರಿಗೆ ಸಿಕ್ಕ ದಾಂಡಿಗ ಏನೆಂದು ಕೇಳಿದಾಗ ಎಲ್ಲವನ್ನು ವಿವರಿಸಿದೆ. ನಾನು ಮಂಡ್ಯದವನೆಂದು ತಿಳಿದು ಅವನಿಗೆ ಸಂತೋಷವಾಗಿತ್ತು. ಅದೆಲ್ಲಿಂದ ಬಂತೋ ಕೋಪ ಅವನಿಗೆ, ಸೀದಾ ರಾಜೇಶನ ರೂಮಿಗೆ ಹೋದವನೆ ಅವನಿಗೆ ಒಂದು ಡಿಚ್ಚಿ ಕೊಟ್ಟಿದ್ದ. ವಿಪರೀತ ರಕ್ತಸ್ರಾವವಾಗಿತ್ತು. ಅದೇ ದಿನ ಸೆಂಕೆಂಡಿಯರ್ ವಿದ್ಯಾರ್ಥಿಗಳೆಲ್ಲರೂ ಇಬ್ಬರಿಗೂ ಹೊಡೆಯಲು ಸಿದ್ದರಾಗಿದ್ದರು. ನನ್ನನ್ನು ರಕ್ಷಿಸಲು ಎಲ್ಲೋ ಒಂದು ಕಡೆ ಕೂಡಿ ಹಾಕಲಾಯಿತು. ಇಡಿ ರಾತ್ರಿ ಮಲುಗಲಿಲ್ಲ. ಬೆಳಿಗ್ಗೆ ಸಿಕ್ಕವನಿಗೆ ಹೊಡೆದು ಪರಾರಿಯಾಗುವುದೆ ಹೇಗೆ ಅಂತ ಯೋಚಿಸತೊಡಗಿದೆ. ಒಂದೆರಡು ದಿನಗಳ ನಂತರ ನನ್ನ ಸ್ನೇಹಿತರಿಗೆ ತಿಳಿಸಿದೆ. ಯಾರೂ ತಯಾರಿರಲ್ಲ. ಇವನನ್ನು ವಿಚಾರಿಸಿಕೊಳ್ಳಲು ಬಹಳ ದಿನಗಳೇನು ಬೇಕಾಗಲಿಲ್ಲ.
ಆ ಕಾಲಕ್ಕೆ 400 ರೂ ಕೊಟ್ಟು ಎರಡು ಅಂಗಿ ತಕೊಂಡಿದ್ದೆ. ನಮ್ಮಪ್ಪ ಯಾರ ಹತ್ತಿರವೋ ಸಾಲ ಮಾಡಿ ಕಾಲೇಜಿನ ಫಿsu, ಬಸ್ ಚಾರ್ಜ್ ಕೊಟ್ಟಿದ್ದರು. ಆ ದಿನ ಧರಿಸಿದ್ದ ಹೊಸ ಅಂಗಿಯನ್ನು ನೋಡಿ ‘ಜೂನಿಯರ್ಸ್ ಹೊಸ ಬಟ್ಟೆ ಹಾಕಬಾರದು’ ಅಂತ ಹೇಳಿದವನು ರಂಗಸ್ವಾಮಿ. ನಾನು ಅವನನ್ನೆ ದುರುಗುಟ್ಟಿ ನೋಡಿದೆ. ಆ ದಿನ ರಾತ್ರಿ ಸೀದಾ ನನ್ನ ರೂಮಿಗೆ ಬಂದವನೇ ಒಂದು ಗ್ಲಾಸ್ ನೀರು ನೆಲದ ಮೇಲೆ ಚೆಲ್ಲಿ, ನನ್ನ ಹೊಸ ಅಂಗಿಯನ್ನು ಹಾಕಿಕೊಂಡು ಸ್ವಿಮ್ ಮಾಡಲು ಹೇಳಿದ. ಆ ರಾತ್ರಿ ಅವನನ್ನು ಹೊಡೆದು ಊರಿಗೆ ಹೋಗುವ ಮನಸ್ಸು ಮಾಡಿದ್ದೆ. ಆದರೆ ಅದೆಷ್ಟೋ ಕನಸುಗಳನ್ನು ಕಟ್ಟಿಕೊಂಡು ನನ್ನ ತಂದೆ ತಾಯಿ ಮಂಗಳೂರಿಗೆ ಕಳುಹಿಸಿದ್ದಾರೆ. ಇವರಿಗೆ ಹೆದರಿ ಮಂಗಳೂರು ಬಿಡಬೇಕೆ, ಛೆ. 
ಅದೇಗೋ ಆ ಪರಿಯ ಗೋಳನ್ನು ಮೂರು ತಿಂಗಳು ತಡೆದುಕೊಂಡೆ. ಮುಂದಿನ ಮೂರು ವರ್ಷ ಸರದಿ ನನ್ನದು. ಅವರಿಬ್ಬರನ್ನು ಯಾವ ಪರಿ ಕಾಡಿದೆವೆಂದರೆ ನಮ್ಮನ್ನು ಕಂಡರೆ ಅವರೇ ಮರೆಯಾಗುವಷ್ಟು. ನನ್ನ ಸಹನೆಯ ಕಟ್ಟೆಯನ್ನು ಮತ್ತು ಕನಸನ್ನು ವಿಸ್ತರಿಸಿದ ಇಬ್ಬರೂ ಆಕಾಲ ಮರಣಕ್ಕೆ ತುತ್ತಾದರು. 
ವಿಮ್ ಪೌಡರ್
ಆ ದಿನ ಬಯೋಕೆಮಿಸ್ಟ್ರಿ ಪ್ರ್ಯಾಕ್ಟಿಕಲ್ ಪರೀಕ್ಷೆ. ಆ ಸಬ್ಜೆಕ್ಟ್ ಪಾಟ ಮಾಡುತ್ತಿದ್ದ ಬೀನಾ ಮೇಡಮ್ ಬಹಳ ಸ್ಟ್ರಿಕ್ಟ್. ಕ್ವಿಜ್ ನಲ್ಲಿ ವಿಟಮಿನ್ ಕೆ ಡಿಫಿಸಿಯೆನ್ಸಿ ಕಾಸಸ್ ಡ್ಯಾಸ್ ಅನ್ನೋ ಪ್ರಶ್ನೆ ಇತ್ತು. ನಾನು ಡಿಸೀಸ್ ಅಂತ ಬರೆದಿದ್ದೆ. ಈ ತರಹದ ಉತ್ತರ ನೋಡಿ ನನ್ನನ್ನು ಚನ್ನಗಿ ನೆನಪಿಟ್ಟುಕೊಂಡಿದ್ರು. ಒಂದಷ್ಟು ವಸ್ತುಗಳನ್ನು ಕೊಟ್ಟು, ಅವುಗಳಲ್ಲಿ proಟೀನ್, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬು ಯಾವುದು ಅಂತ ಹಲವಾರು ಪರೀಕ್ಷೆ ಮಾಡಿ ಕಂಡು ಹಿಡಿಯಬೇಕಿತ್ತು. ನನಗೆ ಎಲ್ಲಾ ಪರೀಕ್ಷೆಗಳು ಗೊತ್ತಿದ್ದವು. ಸಂಜೆ ನಾಲ್ಕರ ಹೊತ್ತಿಗೆ ಕ್ಯೂರಿಯಾಸಿಟಿಯಿಂದ ವಿನಯ್ ನನಗೆ ಸಿಕ್ಕ ವಸ್ತು ಯಾವುದೆಂದು ಕೇಳಿದ. ನಾನು ಅಲ್ಲೇ ವಾಸ್ ಬೇಸಿನ್ ಹತ್ತಿರವಿದ್ದ ಪೆಟ್ರಿಡಿಸ್ ತೋರಿಸಿದೆ. ಅದನ್ನು ನೋಡಿದವನೇ ಹೌಹಾರಿದ. ಏಕೆಂದರೆ ಅದು ಪಾತ್ರೆ ತೊಳೆಯುವ ‘ವಿಮ್’ ಪೌಡರ್ ಆಗಿತ್ತು. ನಾನು ಮೇಡಮ್ ಬಳಿ ಹೋಗಿ ನನಗೆ ಸರಿಯಾದ ವಸ್ತು ಕೊಟ್ಟಿಲ್ಲವೆಂದು ಜಗಳ ಮಾಡಿದೆ. ನನ್ನ ಟೇಬಲ್ಲಿಗೆ ಸೀದಾ ಬಂದವರೆ ಅಲ್ಲಿದ್ದ ಕಲರ್‍ಲೆಸ್ ದ್ರವವೊಂದನ್ನು ತೋರಿಸಿದರು. ನಾನು ಅದನ್ನು ನೋಡಿಯೇ ಇರಲಿಲ್ಲ. ಪರಿಪರಿಯಾಗಿ ಒಂದು ಗಂಟೆ ಹೆಚ್ಚುವರಿಯಾಗಿ ನೀಡಲು ವಿನಂತಿಸಿಕೊಂಡೆ. ಸುತರಾಂ ಒಪ್ಪಲಿಲ್ಲ. ಖಾಲಿ ಪೇಪರ್ ಕೊಟ್ಟು ಹೊರಬಂದೆ. ನನ್ನ ಆಜನ್ಮ ಹಕ್ಕು ಎಂಬಂತೆ ಮತ್ತೆ F-ಗ್ರೇಡ್ ಬಂತು. ತುಂಬಾ ಪ್ರೀತಿಯಿಂದ ಒಪ್ಪಿಕೊಂಡೆ. ಅದೇ ಸಿಟ್ಟಲ್ಲಿ ಆವರದೊಂದು ಪೆನ್ನನ್ನು ಕದ್ದುಬಿಟ್ಟೆ. ಕ್ಲಾಸ್‍ನಲ್ಲಿ ಒಮ್ಮೆ ಅವರ ಪೆನ್ನನ್ನು ನನ್ನ ಕೈಯಲ್ಲಿ ನೋಡಿದರು. ‘ಯಾರದು’ ಅಂದರು. ‘ನಿಮ್ಮದು’ ಅಂದೆ. ಕೇಳಿದರು- ಕೊಟ್ಟೆ. ಯಾಕೆ ಕದ್ದೆ, ಎಲ್ಲಿ ಕದ್ದೆ ಎನ್ನುವ ಅನಗತ್ಯ ಪ್ರಶ್ನೆಗಳನ್ನೇ ಕೇಳಲಿಲ್ಲ. ಮುಂದೆ ತಿಪ್ಪರ್‍ಲಾಗ ಹೊಡೆದು ಹೇಗೋ ಡಾ. ಶ್ರೀಕರ್ ಅವರ ಬಳಿ ಪಾಸಾದೆ. ಈಗ ಆಫಿಸರ್ಸ್ ಕ್ಲಬ್‍ನಲ್ಲಿ ಮೇಡಂ ಮತ್ತು ನಾನು ಒಟ್ಟಿಗೇ ಶಟಲ್ ಆಡ್ತೀವಿ.  ಫಿಸಿಕ್ಸು, ಕೆಮಿಸ್ಟ್ರಿ, ಮ್ಯಾತ್‍ಮೆಟಿಕ್ಸು, ಬಯಾಲಜಿ ಏನು ಬದಲಾಗಲಿಲ್ಲ. ಮೇಡಂ ಹಾಗೇ ಇದ್ದಾರೆ ಮತ್ತು ಹಾಗೆ ಇರುತ್ತಾರೆ. ಅವರಿಗೆ ಒಳ್ಳೆಯದಾಗಲಿ.

 

ಅರ್ಧ ಎಕರೆ ಜಾಗ ಸಾಕು ಹಾಯಾಗಿರೋಕೆ...
ಮಂಗಳೂರಿನ ಸಮೀಪವಿರುವ ಅಡ್ಯಾರಿನಲ್ಲಿ ಜೋಸೆಫ್ ಮೊಂಟೇರೊ ಎಂಬ 39 ವರ್ಷ ಪ್ರಾಯದ ರೈತನ ಬಳಿ ಇರುವುದು ಕೇವಲ ಅರ್ಧ ಎಕರೆ ಮಾತ್ರ. ಅರ್ಧ ಎಕರೆ ಜಮೀನಿನಲ್ಲೂ ಸಮಗ್ರ ಕೃಷಿ ಮಾಡಿ ಯಶಸ್ವೀ ಜೀವನ ನಡೆಸಬಹುದೆಂದು ತಮ್ಮ ಕಾಯಕದ ಮೂಲಕ ತೋರಿಸಿದ್ದಾರೆ.

ಅವರ ಅರ್ಧ ಎಕರೆಯಲ್ಲಿ 35 ಹಂದಿ, 40 ನಾಟಿಕೋಳಿ, 40-50 ಬಾಳೆ, 25 ತಂಗಿನ ಮರ, ಒಂದು ಹಸು ಮತ್ತು ಸ್ವಲ್ಪ ಅರಿವೆ ಸೊಪ್ಪು ಬೆಳೆಯುತ್ತಿದ್ದಾರೆ. ಇವರು ಇಬ್ಬರು ಹೊರರಾಜ್ಯದ ಕೂಲಿ ಆಳುಗಳನ್ನು ಇಟ್ಟುಕೊಂಡು ತಿಂಗಳಿಗೆ 15000 ಸಂಬಳ ಕೊಡುತ್ತಿದ್ದಾರೆ. ಒಂದು ಗೂಡ್ಸ್ ಗಾಡಿ ಇಟ್ಟುಕೊಂಡು ಮಂಗಳೂರಿನಿಂದ ಹೋಟೆಲ್‍ಗಳಲ್ಲಿ ಸಿಗುವ ಆಹಾರ ತ್ಯಾಜ್ಯವನ್ನು ಸಾಗಿಸಿ ಹಂದಿಗಳಿಗೆ ನೀಡುತ್ತಾರೆ. ಹಂದಿಗೂಡುಗಳಿಂದ ಬರುವ ತ್ಯಾಜ್ಯವನ್ನು ಸಂಗ್ರಹಿಸಿ ಗೋಬರ್ ಗ್ಯಾಸ್ ಉತ್ಪಾದಿಸಿ ಅಡಿಗೆಗೆ ಬಳಸುತ್ತಾರೆ. ವರ್ಷಕ್ಕೆ 3000-4000 ಕೆ,ಜಿ ಹಂದಿಯನ್ನು ಉತ್ಪಾದಿಸುತ್ತಾರೆ. ಕೇಜಿಗೆ ರೂ. 110-150 ರಂತೆ ಮಾರಿ 4-5 ಲಕ್ಷ ಒಟ್ಟು ಆದಾಯ ಗಳಿಸಿದರೆ, ಕೋಳಿಗಳಿಂದ 10 ಸಾವಿರ, ದಿನನಿತ್ಯದ ಖರ್ಚಿಗೆ ಅರಿವೆ ಸೊಪ್ಪಿನಿಂದ ಬರುವ ಆದಾಯವನ್ನು ಬಳಸುತ್ತಾರೆ. ಕೇವಲ ಒಂದು ಬಾವಿ ಮತ್ತಿ ಕೊಳವೆ ಬಾವಿಯಿಂದ ಸಿಗುವ ನೀರಿನಿಂದ ಎಲ್ಲವನ್ನೂ ನಿರ್ವಹಿಸುತ್ತಿದ್ದಾರೆ. ತೆಂಗು ಮತ್ತು ಬಾಳೆಯಿಂದ ಬರುವ ಆದಾಯ ಅವರು ಬಳಸುವ ಗೂಡ್ಸ್ ಗಾಡಿ ಡೀಸೆಲ್ ಗೆ ಸಾಕಾಗುತ್ತದೆ. ಮನೆಬಳಕೆಯ ಹಾಲಿಗೆ ಹಸು (ಗಿರ್ ತಳಿ) ತಂದಿದ್ದಾರೆ. ಹತ್ತಾರು ಎಕರೆ ಜಮೀನಿರುವ ರೈತರೇ ತಲೆ ಮೇಲೆ ಕೈಹೊತ್ತು ಕುಳಿತಿರುವ ಈ ಸಮಯದಲ್ಲಿ ಜೋಸೆಫ್‍ರಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಕೊನೇ ಪಕ್ಷ ಜೀವನೋತ್ಸಾಹ. 

ಸ್ಕ್ಯೂಬಾ ಡೈವಿಂಗ್-ಒಂದು ರೋಚಕ ಅನುಭವ
ನಾನು ಮೀನುಗಾರಿಕೆ ಪಧವಿಯನ್ನು ಪಡೆದದ್ದಕ್ಕೂ ಸಾರ್ಥಕವಾಯಿತು ನನ್ನ ಜೀವನ. ಅಪ್ಪಟ ನಾಸ್ತಿಕನಾಗಿದ್ದವನು, ಆ ಕ್ಷಣ ಆಸ್ತಿಕನಾಗಿಬಿಟ್ಟೆ. ಮನುಷ್ಯ ಏನ್ ಕಂಡುಹಿಡಿದಿದ್ದರೇನು?. ಈ ಸೃಷ್ಟಿ ಮುಂದೆ, ಮನುಷ್ಯ nil ಕಣ್ರಿ. ಅದೆಷ್ಟೋ ವರ್ಷಗಳಿಂದ ಸಿ. ಅಶ್ವಥ್ ಹಾಡಿರುವ ‘ಕಾಣದ ಕಡಲಿಗೇ..ಹಂಬಲಿಸಿದೇ ಮನ:, ಕಾಣಬಲ್ಲೆನೇ ಒಂದು ದಿನಾ’ ಹಾಡನ್ನು ಹಾಡ್ಕೊಳ್ತಾ ಇದ್ದೆ. ಕಂಡೇಬಿಟ್ಟೆ. ನಾನು ಮೀನುಗಾರಿಕೆ ಮಹಾವಿದ್ಯಾಲಯದಲ್ಲಿ ಪಾಟ ಮಾಡೋದು ‘ಅಕ್ವಾಟಿಕ್ ಎಕಾಲಜಿ ಅಂಡ್ ಬಯೋಡೈವರ್ಸಿಟಿ’ ಸಬ್ಜೆಕ್ಟು. ನೀರಿಗಿಳಿಯದ ಸ್ವಿಮ್ಮಿಂಗ್ ಟ್ರೈನರ್ ತರಹ ಪಾಟ ಮಾಡಬೇಕಿತ್ತು. ನೀರಲ್ಲಿ ಪಲ್ಟಿ ಹೊಡೆದು ಬಂದಮೇಲೆ ಪ್ರಕೃತಿಯೆಡೆಗಿನ ನನ್ನ ದೃಷ್ಟಿಕೋನವೇ ಬದಲಾಯ್ತು. 
ಪ್ರಾಣಿ ಸಂಗ್ರಹಾಲಯದಲ್ಲಿ ಪ್ರಾಣಿಗಳನ್ನು ನೋಡುವುದಕ್ಕೂ, ಸಫಾರಿಯಲ್ಲಿ ಪ್ರಾಣಿಗಳನ್ನು ಅವುಗಳ ಸ್ವಾಭಾವಿಕ ವಾಸಸ್ಥಳಗಳಲ್ಲಿ ನೋಡುವುದಕ್ಕೂ ಅಜಗಜಾಂತರದ ಅನುಭವ. ಅಕ್ವೇರಿಯಂನಲ್ಲಿ ಬಣ್ಣಬಣ್ಣದ ಮೀನುಗಳನ್ನು ನೋಡಲು ಚಂದ. ಆದರೆ ಆಳ ಸಮುದ್ರದಲ್ಲಿ ನೂರಾರು ಬಗೆಯ ಮೀನುಗಳನ್ನು ಅವುಗಳ ಜೊತೆಗೇ ಈಜಿಕೊಂಡು ನೋಡುವುದನ್ನು ಪದಗಳಲ್ಲಿ ಬಣ್ಣಿಸುವುದಾದರೂ ಹೇಗೆ. 
ಸ್ಕ್ಯೂಬಾ ಡೈವಿಂಗ್
ನೀರಿನಲ್ಲಿ ಮುಳುಗಲು ಬೇಕಾದ ಅಗತ್ಯ ಸಾಮಗ್ರಿಗಳನ್ನು ಬೆನ್ನಿಗೆ ಕಟ್ಟಿಕೊಂಡು ನೀರಿನಲ್ಲಿ ಮುಳುಗುವುದನ್ನು ಸ್ಕ್ಯೂಬಾ ಡೈವಿಂಗ್ ಎನ್ನುತ್ತಾರೆ. SCUBA means-Self contained underwater Breathing Apparatus ಎಂದರ್ಥ. ಟೀವಿ, ಸಿನಿಮಾಗಳಲ್ಲಿ ನೋಡಿದ ಅನುಭವವಿತ್ತು. ಆದರೆ, ‘ಮುಂದಿನ ತಿಂಗಳು ಎರಡನೇ ಶನಿವಾರ ಸ್ಕ್ಯೂಬಾ ಡೈವಿಂಗ್ ಹೋಗೋಣ, faಮಿಲಿ ಸಮೇತ’. ನಾನು ರಾಗ ತೆಗೆಯುವ ಮೊದಲೇ foನಿಟ್ಟ...ಸುಬ್ಬಿ ಅಲಿಯಾಸ್ ವೆಂಕಟಸುಬ್ಬಯ್ಯ ಅಲಿಯಾಸ್ ಪ್ರದೀಪ್. ಬೇರೆ ದೇಶದಲ್ಲಿ ಎಲ್ಲೋ ಐವತ್ತು ಸಾವಿರ ತೆತ್ತು ಸ್ಕ್ಯೂಬಾ ಡೈವಿಂಗ್‍ಗೆ ಹೋಗ್ತಾರೆ. ಇಲ್ಲೆ, ನಮ್ಮ ರಾಜ್ಯದಲ್ಲೆ, ಮುರ್ಡೇಶ್ವರದಲ್ಲಿ ಸ್ಕ್ಯೂಬಾ ಡೈವಿಂಗ್ ಇದೆ. ನಾವು ಫಿಶರೀಶ್ ಗ್ರ್ಯಾಜುಯೇಟ್ಸ್ ಆಗಿ ಹೋಗದಿದ್ದರೆ ಹೇಗೆ?. ‘ನೆಕ್ಸ್ಟ್ ವೀಕ್ ನಾವು ಅಲ್ಲಿರ್ತೀವಿ’ ಅಂತ phoನ್ ಬಂತು. ಅಂದುಕೊಂಡ ಹಾಗೆ ನಾನು, ಪ್ರದೀಪ್ ಮತ್ತು ಅಶೋಕ ಅಲ್ಲಿದ್ದೆವು. ಎಲ್ಲರೂ ಮೀನುಗಾರಿಕೆ ಪದವೀಧರರೆ. 

ನೇತ್ರಾಣಿ ಐಲ್ಯಾಂಡ್

ಮುರ್ಡೇಶ್ವರದ ಕರಾವಳಿ ತೀರದಿಂದ ಪಶ್ಚಿಮ ದಿಕ್ಕಿಗೆ ಸಮುದ್ರದಲ್ಲಿ 20 ಮೈಲು ದೂರದಲ್ಲಿ ನೇತ್ರಾಣಿ ದ್ವೀಪವಿದೆ. ದೇವಸ್ಥಾನದ ಮುಂಬಾಗದಲ್ಲಿ ಸ್ಕ್ಯೂಬಾ ಡೈವಿಂಗ್‍ನ ಆಫಿಸ್. ಬೆಳಿಗ್ಗೆ ಎಂಟು ಗಂಟೆಗೇ ಅಲ್ಲಿರಬೇಕು. ನಾಲ್ಕುವರೆ ಸಾವಿರ ಒಬ್ಬರಿಗೆ. ಸತ್ತರೆ ನಮ್ಮ ಹಣೆಬರಹ ಅನ್ನೋ faರಂಗೆ ಸಹಿ ಹಾಕಿಸಿಕೊಂಡು, ಒಂದು ಸಣ್ಣ ಬೋಟ್‍ನಲ್ಲಿ ಕರೆದುಕೊಂಡು ಹೋಗುತ್ತಾರೆ. ಲೈಟ್ ತಿಂಡಿ ತಿನ್ಕೊಂಡೋದ್ರೆ ಒಳ್ಳೆಯದು. ಅವರೇ ಹಣ್ಣು ಹಂಪಲು ಕೊಡುತ್ತಾರೆ. ಬೆಳಿಗ್ಗೆ ಚನ್ನಾಗಿ ತಿಂದಿದ್ರೆ ವಾಂತಿ ಗ್ಯಾರಂಟಿ. ಸುಮಾರು ಒಂದೂವರೆ ಗಂಟೆ ಪ್ರಯಾಣ. ದಾರಿಯುದ್ದಕ್ಕು ಎಕ್ಸ್‍ಪರ್ಟ್ ಡೈವರ್‍ಗಳು ನಾವು ನೀರಿನಲ್ಲಿ ಇದ್ದಾಗ ಬಳಸಬೇಕಾದ ಸನ್ನೆಯ ಭಾಷೆಯ ಬಗ್ಗೆ ಮತ್ತು ಪರಿಕರಗಳನ್ನು ಬಳಸುವ ವಿಧಾನದ ಬಗ್ಗೆ ವಿವರಣೆ ಕೊಡ್ತಾರೆ. ನಮ್ಮ ಜೊತೆ ದೆಹಲಿಯ ಯುವಕ ವಿಕ್ರಂ ಮತ್ತು ಪೋರ್ಚುಗಲ್‍ನ ಹುಡುಗಿ   ಆ ದ್ವೀಪ ತಲುಪಿದ ಮೇಲೆ, ಅಲ್ಲಿ ದೋಣಿಯನ್ನು ಲಂಗರು ಹಾಕಿ ಒಬ್ಬೊಬ್ಬರನ್ನೇ ಕರೆದು ಡೈವಿಂಗ್ ಸೂಟ್ ಹಾಕುತ್ತಾರೆ. ಒಬ್ಬೊಬ್ಬರಿಗೂ ಒಬ್ಬ ಇನ್ಸ್ಟ್ರಕ್ಟರ್ ಬರುತ್ತಾನೆ. ಸಮಯ ಕಳೆಯಲು ಸ್ನೋರ್ಕ್‍ಲಿಂಗ್-ಕಣ್ಣಿಗೆ ಗ್ಲಾಸು, ಉಸಿರಾಡೋ ಒಂದು ಪೈಪು ಮತ್ತು ತೇಲಿಸುವ ಜಾಕೆಟ್ ಹಾಕಿಕೊಂಡು ನೀರಿನಲ್ಲಿ ತೇಲಿಕೊಂಡು ಜಲಚರಗಳನ್ನು ನೋಡಬಹುದು. ಹೋಗುವ ದಾರಿಯಲ್ಲೇ, ನನ್ನ ಹೆಂಡತಿ ರೇಖಾ ಸಣ್ಣ ಕರುಳು, ದೊಡ್ಡ ಕರುಳಿನಲ್ಲಿದ್ದುದನ್ನೆಲ್ಲಾ ವಾಮಿಟ್ ಮಾಡಿದಳು. ಅಲ್ಲಿ ಪಾಚಿಕೊಂಡವಳು ಎಚ್ಚರವಾಗಿದ್ದೇ..ಸಂಜೆ ವಾಪಾಸು ಬರುವಾಗ-ಮತ್ತೆ ವಾಮಿಟ್ ಮಾಡೋಕೆ. ನನ್ನ ಮಗ ರಿಶಿ ಮಗದ ಉತ್ಸಾಹದಿಂದಲೇ ಸ್ನೋರ್ಕ್‍ಲಿಂಗ್ ಮಾಡಿದ. ಅವನೂ ಡೈವಿಂಗ್‍ಗೆ ಬರಲು ಸಿದ್ಧನಿದ್ದ. ಭಯದಲ್ಲಿ ನನಗೇ ಹೃದಯ ಬಾಯಿಗೆ ಬಂದಿತ್ತು. ಅದಕ್ಕೆ ಅವನನ್ನು ಕಳುಹಿಸಲು ಒಪ್ಪಲಿಲ್ಲ. ಹತ್ತು ವರ್ಷದ ಮೇಲ್ಪಟ್ಟ ಎಲ್ಲರೂ ಸ್ಕ್ಯೂಬಾ ಡೈವಿಂಗ್ ಮಾಡಬಹುದು. ಗರ್ಬಿಣಿಯರು, ಹೃದಯ ಸಂಬಂಧಿ, ಅಸ್ಥಮಾ ಕಾಯಿಲೆ ಮತ್ತು ಬೆನ್ನುಮೂಳೆ ಸಮಸ್ಯೆ ಇರುವವರು ಸ್ಕ್ಯೂಬಾ ಡೈವಿಂಗ್ ಮಾಡುವುದು ಅಪಾಯಕಾರಿ. 
ನನ್ನ ಸ್ನೇಹಿತನ ಹೆಂಡತಿ ಜ್ಯೋತಿ ಗಟ್ಟಿಗಿತ್ತಿ. ಆ ಸಣ್ಣ ಮಗೂನ ಎತ್ಕೊಂಡು ಸಮುದ್ರಕ್ಕೆ ನೆಗೆಯೋಕೆ ಬಂದಿದ್ದಾಳೆ. ಹೌಸ್‍ವೈfu ಜ್ಯೋತಿ ನನಗಿಂತ ಮೊದಲೇ ನೀರಿಗೆ ದುಮಿಕಿ ಬಿಡೋದೆ. 
ನನಗೆ ಡೈವಿಂಗ್ ಸೂಟ್ ಹಾಕುವಾಗ ಮನೆಯವರನ್ನೆಲ್ಲಾ ನೆನೆಸಿಕೊಂಡೆ. ವಾಮಿಟ್ ಮಾಡಿ ಸುಸ್ತಾಗಿ ಮಲುಗಿದ್ದ ನನ್ನ ಹೆಂಡತಿಯನ್ನೊಮ್ಮೆ ನೋಡಿದೆ. ನನ್ನ ಮಗ ಸ್ನೋರ್ಕ್‍ಲಿಂಗ್ ಮಾಡ್ತಾ ಇದ್ದ. ಗಟ್ಟಿ ಮನಸ್ಸು ಮಾಡಿ ನೀರಿಗೆ ದುಮುಕಿದೆ..
ಅಬ್ಬಾ..ಅಬ್ಬಬ್ಬ.., ಒಂದೇ ನಿಮಿಷಕ್ಕೆ ಥಮ್ಸ್ ಅಪ್ ಮಾಡಿಬಿಟ್ಟೆ. ನೀರಿನಡಿಯಲ್ಲಿ ಸಂಕಷ್ಟದಲ್ಲಿದ್ದಾಗ ತೋರಿಸಬೇಕಾದ ಚಿನ್ಹೆ. ನನ್ನ ಇನ್ಸ್ಟ್ರಕ್ಟರ್ ಸರ್ರನೆ ಮೇಲಕ್ಕೆ ಕರೆತಂದ. ನನಗಿನ್ನ ಮೊದಲೇ ಡೈವಿಂಗ್ ಮುಗಿಸಿದ್ದ ಜ್ಯೋತಿ, ಬೋಟ್‍ನಲ್ಲಿ ಕೂತು ನನ್ನನ್ನು ನೋಡಿ ನಗ್ತಾ ಇದ್ಳು. ನಮ್ಗೆ ಮತ್ತೆ ಸಿಟ್ಟು ಬಂತು. ಅದೇ ಸಿಟ್ಟನಲ್ಲಿ ಯೂ-ಟರ್ನ್...ಸಮುದ್ರದಲ್ಲಿ ಮುಳುಗಿದೆ.
ದಿಗ್ಮೂಡ, ವಿಸ್ಮಯ, ಕೌತುಕ, ಆಶ್ಚರ್ಯ @#$%^&* ಎಲ್ಲವೂ ಒಟ್ಟಿಗೇ ಆಯಿತು. ಬೋರ್ಗರೆವ ಸಮುದ್ರ ನಿಜಕ್ಕೂ ದಿವ್ಯಮೌನ, ಪ್ರಶಾಂತ, ವಿಶಾಲ, ಅಗಾಧ. ಹನ್ನೆರಡು ಮೀಟರ್ ಆಳದಲ್ಲಿ ಕೋರಲ್‍ನಿಂದಾದ ಬೆಟ್ಟಗಳು, ಪ್ರಪಾತಗಳು, ಕಣಿವೆಗಳು. ಆ ಸಣ್ಣ ಪರ್ವತಗಳು ಹಿಮಾಲಯ ಪರ್ವತದಂತೆ ಎತ್ತರ ಎತ್ತರ ಬಾಸವಾಗುತ್ತಿತ್ತು. ಆಗ ಬಂದವು..ಅದೆಲ್ಲೋ ವಿದೇಶಿ ಪುಸ್ತಕದಲ್ಲಿ, ಡಿಸ್ಕವರಿ ಚಾನೆಲ್‍ನಲ್ಲಿ ಕಂಡ ಮೀನುಗಳು..ಒಂದಲ್ಲ, ಎರಡಲ್ಲ..ಸಾವಿರಾರು. ಜೀವಂತವಾಗಿದ್ದ ಸೀಅನಿಮೋನ್‍ಗಳು, ದೈತ್ಯಾಕಾರದ ಡೆಡ್ಲಿ ಮೊರೆಯೀಲ್, ಸ್ಕಾರ್ಪಿಯನ್ ಫಿûಶ್ ಇನ್ನೂ ಅನೇಕ. ಹೆಸರುಗಳು ಯಾವನಿಗ್ಗೊತ್ತು. ಟ್ಯಾಕ್ಸಾನಮಿ ಪೂರ್. ಆ ನನ್ಮಗ ದೇವರು ಭಲೇ ಚಾಲಕಿ ಕಣ್ರಿ. ಅಷ್ಟು ಸುಂದರವಾದ ಮೀನುಗಳನ್ನ ಸಮುದ್ರದ ಆಳದಲ್ಲಿಟ್ಟಿದ್ದಾನೆ. 
ನಾನು ಕಳೆದ ಬಾರಿ ಸ್ಕ್ಯೂಬಾ ಡೈವಿಂಗ್‍ಗೆ ಹೋಗಿ ಬಂದಮೇಲೆ ಯೂನಿವರ್ಸಿಟಿಯ ಬೋರ್ಡ್ ಮೀಟಿಂಗ್‍ಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಅರವಿಂದ್ ಜನ್ನು ಮಂಗಳೂರಿಗೆ ಬಂದಿದ್ರು. ಮೀಟಿಂಗ್ ಮುಗಿದ ಮೇಲೆ ಮಾತಿನ ಮಧ್ಯೆ ‘ಹದಿಮೂರು ವರ್ಷಗಳ ಹಿಂದೆ, ನಾನು ಸ್ಕ್ಯೂಬಾ ಡೈವಿಂಗ್‍ಗೆ ಹೋಗಿದ್ದೆ. ರಿಯಲಿ ಅಮೇಝಿಂಗ್’ ಅಂದರು. ಅಂದಿದ್ದೇ ತಡ. ಶುರು ಹಚ್ಕೊಂಡುಬಿಟ್ಟೆ ಭಾಷಣ. ‘ಸಾರ್, ಫಿಶರೀಸ್ ಕಾಲೇಜಿನಲ್ಲಿ ಸ್ಕ್ಯೂಬಾ ಡೈವಿಂಗ್ ಬಗ್ಗೆ ಕಲಿಸ್ತಾ ಇಲ್ಲ. ಅದನ್ನು ಒಂದು ಕೋರ್ಸ್ ಆಗಿ ಇಂಟ್ರೊಡ್ಯೂಸ್ ಮಾಡಬೇಕು. ಅದಕ್ಕೆ ಸರ್ಕಾರದಿಂದ ಅನುಮತಿ ಮತ್ತು ಹಣಕಾಸಿನ ಸಹಾಯ ಬೇಕು’ ಅಂದೆ. 
‘ಇಂಟ್ರೆಸ್ಟಿಂಗ್, ಪ್ರpoಸಲ್ ಕಳುಹಿಸಿ’ ಅಂದ್ರು.
ಮುಂದೊಂದು ದಿನ ಕಾಲೇಜಿನಲ್ಲಿ, ಡೀನ್ ಜೊತೆ ಮಾತಾಡೋವಾಗ ಈ ಪ್ರಸ್ತಾಪ ಮುಂದಿಟ್ಟೆ. ತುಂಬಾ ಪ್ರ್ಯಾಕ್ಟಿಕಲ್ ಆದ ವ್ಯೆಕ್ತಿ ಅವರು. ‘ಇನ್ ವೆಶ್ಟ್, ಇದೆಲ್ಲ ಕಾಮನ್, ದುಡ್ದಿದೆ. ಆದರೆ ನಮ್ಮದು ಗೊತ್ತೇ ಇದೆ. ಎನಿವೇ, ಇದನ್ನ ಮಾಸ್ಟರ್ ಡಿಗ್ರಿಗೆ ಇಂಟ್ರೊಡ್ಯೂಸ್ ಮಾಡಬಹುದು, ನೋಡೋಣ’ ಅಂದ್ರು.
ನನಗೆ ಸ್ಕ್ಯೂಬಾ ಡೈವಿಂಗ್‍ಗೆ ಹೋಗಿ ಬಂದಮೇಲೆ, ಹದಿನೈದು ದಿನ ರಾತ್ರಿ ಕನಸಲ್ಲೆಲ್ಲಾ ಬಣ್ಣದ ಮೀನುಗಳೆ..ಸುಂದರ ಕನಸುಗಳು..
ಮುಂದೆ ಎಂದಾದರೊಂದು ದಿನ ಎಲ್ಲರನ್ನೂ ಒಪ್ಪಿಸಿ, ಸ್ಕ್ಯೂಬಾ ಡೈವಿಂಗ್ ಅನ್ನು ಒಂದು ಕೋರ್ಸ್ ಆಗಿ ಕಾಲೇಜಿನಲ್ಲಿ ತರುತ್ತೇನೆ...ಹುಡುಗರಿಗೆ ಒಂದಷ್ಟು ಒಳ್ಳೆ ಕನಸುಗಳಾದರು ಬೀಳಲಿ. 

Formalin in Fish: Truth-Myths

ಮೀನು-faರ್ಮಲಿನ್ ದ್ರಾವಣ: ಸತ್ಯ-ಮಿಥ್ಯಗಳು

Faರ್ಮಲಿನ್ ಎಂಬ ರಾಸಾಯನಿಕ ವಸ್ತುವು ಒಂದು ಬಹುಪಯೋಗಿ ವಸ್ತು. ಬಯಾಲಜಿ ಪ್ರಯೋಗಾಲಯಗಳಲ್ಲಿ ಜೀವವಸ್ತುಗಳನ್ನು ಅನೇಕ ವರ್ಷಗಳ ಕಾಲ ಕೆಡದಂತೆ ಇಡಲು ಈ ದ್ರಾವಣವನ್ನು 10-15 ಪಿಪಿಎಂ (parts ಪರ್ ಮಿಲಿಯನ್-ಮಿಲಿಯನ್‍ನಲ್ಲಿ ಒಂದು ಭಾಗ) ನಷ್ಟು ಬಳಸುವುದು ವಾಡಿಕೆಯಲ್ಲಿದೆ. ಈ ರಾಸಾಯನಿಕವನ್ನು ಮರ, ಪೇಪರ್, ಬಣ್ಣ ಮತ್ತು ಬಟ್ಟೆ ಖಾರ್ಕಾನೆಗಳಲ್ಲಿ ಯಥೇಚ್ಚವಾಗಿ ಬಳಸಲಾಗುತ್ತದೆ. ಆದರೆ ಸುದ್ದಿಯಾದದ್ದು ಕಳೆದ ಆರು ತಿಂಗಳಿನಿಂದ. ರಾಜ್ಯದ, ಅದರಲ್ಲೂ ಕರಾವಳಿ ತೀರದ ಮೀನು ತಿನ್ನುವ ಜನರಲ್ಲಿ ಒಂದು ಆತಂಕ ಮನೆಮಾಡಿ, ಹೆಚ್ಚು ಸುದ್ದಿಯಾದದ್ದು ಮೀನಿನ ತಾಜಾತನ ಕಾಪಾಡಲು ಮೀನು ಮಾರಾಟಗಾರರು ಬಳಸುತ್ತಿರುವ faರ್ಮಲಿನ್ ದ್ರಾವಣ. ಅನೇಕ ವರ್ಷಗಳಿಂದ ನೇರವಾಗಿ ತಿನ್ನುವ ಆಹಾರ ಪದಾರ್ಥಗಳಲ್ಲಿ ನಿಷೇದಿತ faರ್ಮಲಿನ್ ದ್ರಾವಣವನ್ನು ಒಂದು ಪ್ರಮಾಣದಲ್ಲಿ, ಕೆಲವು ಮಾರಾಟಗಾರರು ಬಳಸುತ್ತಿದುದು ನಿಜ ಎಂದು ಮಾರಾಟಗಾರರೂ ಒಪ್ಪುತ್ತಾರೆ. ಮಳೆಗಾಲದಲ್ಲಿ ಬೇರೆ ರಾಜ್ಯಗಳಿಂದ ಮೀನಿನಲ್ಲಿ ಈ ಅಂಶ ಕಂಡು ಬಂದಿತ್ತು. ಈ ದ್ರಾವಣವನ್ನು ಮೀನಿಗೆ ಬಳಸುವ ಮಂಜುಗಡ್ಡೆಯಲ್ಲಿ ಮತ್ತು ಮೀನಿನ ಮೇಲೆ ನೇರವಾಗಿ ಬಳಸಲಾಗುತ್ತಿತ್ತು. ಈ ರಾಸಾಯನಿಕವು ಸುಲಭವಾಗಿ ನೀರಿನಲ್ಲಿ ಕರಗುವುದರಿಂದ ಮತ್ತು ಮೀನನ್ನು ಬೇಯಿಸುವಾಗ ಶಾಖದಿಂದ ಇದರ ಪರಿಣಾಮ ಕಡಿಮೆಯಾಗುವುದರಿಂದ ದೊಡ್ಡ ಅನಾಹುತಗಳೇನು ಸಂಭವಿಸಿಲ್ಲ. ಆದರೆ ಇವುಗಳ ನಿರಂತರ ಸೇವನೆಯಿಂದ ನಮ್ಮ ಯಕೃತ್ತು ಮತ್ತು ಮೂತ್ರಪಿಂಡದ ಮೇಲೆ ಒತ್ತಡ ಹೆಚ್ಚುತ್ತದೆ. ಈ ದ್ರಾವಣದ ಸಾಂಧ್ರತೆ ಆಹಾರದಲ್ಲಿ ಹೆಚ್ಚಿಗೆ ಇದ್ದರೆ ಹೊಟ್ಟೆನೋವು, ಉರಿ, ಗುದದ್ವಾರದ ಉರಿ, ವಾಂತಿ ಮತ್ತೂ ಅತಿಯಾದರೆ ಸಾವು ಸಂಭವಿಸಬಹುದು. ನಮ್ಮ ದೇಶವೂ ಸೇರಿದಂತೆ ಹಲವಾರು ದೇಶಗಳು ಇದನ್ನು ಆಹಾರದ ಬಳಕೆಯಲ್ಲಿ ನಿಷೇಧಿಸಲಾಗಿದೆ. ಆದರೆ ಇದರ ಬಳಕೆಯನ್ನು ಮೀನಿನ ಆಹಾರ ಉತ್ಪಾದನೆಯಲ್ಲಿ 10 ಪಿಪಿಎಂ ವರೆಗೆ ಬಳಸಲು ಅನುಮತಿ ಇದೆ. ಈ ಬಗ್ಗೆ ರಾಜ್ಯದ ಮೀನುಗಾರರಿಗೆ ಸಂಪೂರ್ಣ ಅರಿವಿದ್ದು, ಯಾರೊಬ್ಬರೂ ಬಳಸುತ್ತಿಲ್ಲ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ. 
ಪ್ರಕೃತಿಯಲ್ಲಿ ಈ ದ್ರಾವಣ:
ಪ್ರಕೃತಿಯಲ್ಲಿ ಈ ದ್ರಾವಣ ಹೇರಳವಾಗಿ ಹಲವಾರು ಆಹಾರ ಪದಾರ್ಥಗಳಲ್ಲಿ ಸ್ವಾಭಾವಿಕವಾಗಿ ಇರುತ್ತದೆ. ಮೀನುಗಳು ಸತ್ತ ಮೇಲೆಯೂ ರಾಸಾಯನಿಕ ಕ್ರಿಯೆಗಳು ಮುಂದುವರೆದು, ಟ್ರೈಮೀಥೈಲ್ ಅಮೈನ್ ಅಕ್ಸೈಡ್ ವಿಭಜನೆಗೊಂಡು faರ್ಮಲಿನ್ ಉತ್ಪತ್ತಿಯಾಗುತ್ತದೆ. ಬಾಂಬೆ ಡಕ್ ಮತ್ತು ನೂಡಲ್ ಫಿಶ್‍ಗಳಲ್ಲಿ 100-140 ಪಿಪಿಎಂ ವರಗೆ ಇರುವುದು ಸಾಬೀತಾಗಿದೆ. ವಿಶ್ವ ಆಹಾರ ಸಂಸ್ಥೆಯ ಪ್ರಕಾರ ನಾವು ಸೇವಿಸುವ ಆಹಾರಗಳಲ್ಲಿ ಈ ಕೆಳಕಂಡ ಪ್ರಮಾಣದಲ್ಲಿ ಪಾರ್ಮಲಿನ್ ಅಂಶವಿರುತ್ತದೆ. 
ಅಹಾರ        ಅಂಶ (ಮಿ.ಗ್ರಾಂ/ಕೆ.ಜಿ.) ಆಹಾರ         ಅಂಶ (ಮಿ.ಗ್ರಾಂ/ಕೆ.ಜಿ.)
ಸೇಬು         6.3-22.3                 ದನದ ಮಾಂಸ           4.60
ಸವತೆಕಾಯಿ 2.3-3.7                 ಹಂದಿ ಮಾಂಸ           5.8-20
ಕಲ್ಲಂಗಡಿ ಹಣ್ಣು 9.20                         ಕೋಳಿ ಮಾಂಸ           2.5-5.7
ಹಸಿರು ಈರುಳ್ಳಿ 13.3-26.3                 ಕುರಿ ಮಾಂಸ           8.00
ಬೀಟ್ ರೂಟ್ 35.00                ಸಂಸ್ಕರಿಸಿದ ಸಾಸೇಜ್  <20.7
ಹೂಕೋಸು 26.90                ಬಾಂಬೆ ಡಕ್ ಮೀನು <140
ಆಲೂಗೆಡ್ಡೆ         19.50                ಕ್ರಸ್ಟೇಸಿಯನ್ಸ್         1.0-98.0
ಒಣಗಿದಅಣಬೆ 100-406                ಸೀಗಡಿ                 1.0-2.4
ಎಲೆಕೋಸು 5.30                       ಹಸುವಿನ ಹಾಲು        <3.30
ದ್ರಾಕ್ಷಿ         22.40               ಬೊಂಡಾಸ್                1.80
ಪೀರ್         38.7-60.0               ಚೀಸ್                        <3.30
ಟೊಮ್ಯಾಟೋ 5.7-13.30              ಮೇಕೆ ಹಾಲು                1.0
ಮಧ್ಯ         0.02-3.8              ಸಾft ಡ್ರಿಂಕ್ಸ್                8.7
ಬ್ರೀವ್ಡ್ ಕಾಫಿ 3.4-4.5              ಇನ್‍ಸ್ಟೆಂಟ್ ಕಾಫಿ        10.0-16.0
ಆಧಾರ: ವಿಶ್ವ ಆರೋಗ್ಯ ಸಂಸ್ಥೆ
ಇದನ್ನು ಪತ್ತೆ ಹಚ್ಚುವುದು ಹೇಗೆ?
ಎಲ್ಲಾ ಅರಿವಿದ್ದು, ಕೆಲವರು ಬಳಸುತ್ತಿದ್ದರೆ ಇದನ್ನು ಪತ್ತೆ ಹಚ್ಚುವುದು ಸುಲಭ. ಮೀನನ್ನು ಮೂಸಿದಾಗ faರ್ಮಲಿನ್ ದ್ರಾವಣದ ಘಾಟು ಮೂಗಿಗೆ ಬಡಿಯುತ್ತದೆ. ಈ ದ್ರಾವಣ ಬಳಸಿದ ಮೀನನ್ನು ಗುಣಮಟ್ಟವನ್ನು ಪರೀಕ್ಷಿಸಿದರೆ ಉತ್ತಮ ಗುಣಮಟ್ಟದ ಅಂಶಗಳೇ ಕಂಡುಬರುತ್ತವೆ. ಆದರೆ ಸುಲಭವಾಗಿ ಗ್ರಾಹಕರೇ ಈ ದ್ರಾವಣವನ್ನು ಮೀನಿನಲ್ಲಿ ಪತ್ತೆ ಹಚ್ಚಬಹುದು. ಭಾರತೀಯ ಮೀನು ತಂತ್ರಜ್ಞಾನ ಸಂಸ್ಥೆ, ಕೊಚ್ಚಿನ್ ಅಭಿವೃದ್ಧಿ ಪಡಿಸಿದ faರ್ಮಕಿಟ್‍ಗಳು ರೂಪಾಯಿ 250/- ಮಾರುಕಟ್ಟೆಯಲ್ಲಿ ಲಭ್ಯವಿದೆ. ರಸಸಾರವನ್ನು ಪರೀಕ್ಷಿಸಲು ಬಳಸುವ ಕಾಗದದ ಮಾದರಿಯಲ್ಲೇ ಕಾಗದದ ಪಟ್ಟಿಗಳಿರುತ್ತವೆ. ಈ ಪಟ್ಟಿಯನ್ನು ಹಸಿಮೀನಿನ ಮೇಲೆ ಕೆಲವು ಸೆಕೆಂಡುಗಳ ಕಾಲ ಇಟ್ಟು, ನಂತರ ತೇವಗೊಂಡ ಪೇಪರ್ ಭಾಗದ ಮೇಲೆ ಕಿಟ್‍ನಲ್ಲೇ ನೀಡಿರುವ ದ್ರಾವಣವನ್ನು ಎರಡು ಹನಿ ಹಾಕಬೇಕು. ಆಗ ರಾಸಾಯನಿಕ ಕ್ರಿಯೆ ನಡೆದು ಕಾಗದದ ಬಣ್ಣ ಬದಲಾಗುತ್ತದೆ. ಆ ಬಣ್ಣವನ್ನು ಕಿಟ್‍ನ ಮೇಲಿರುವ ಮಾದರಿ ಬಣ್ಣಗಳ ಜೊತೆ ಅವಲೋಕಿಸಿ ಕಡು ನೀಲಿ/ಬೂದು ಬಣ್ಣ ಹೊಂದಿದ್ದರೆ ಮೀನನ್ನು ತಿರಸ್ಕರಿಸಬೇಕು. ತಿಳಿ ಬೂದು ಬಣ್ಣ ಹೊಂದಿದ್ದರೆ ಮೀನನ್ನು ಸೇವಿಸಲು ಅಡ್ಡಿಯಿಲ್ಲ ಎಂದು ಭಾವಿಸಬಹುದು. ಅಧಿಕೃತ ಮಾರಾಟಗಾರರಿಂದ ಉತ್ತಮ ಮೀನನ್ನು ಜಾಣ್ಮೆಯಿಂದ ಆಯ್ದುಕೊಳ್ಳುವ ಜವಬ್ದಾರಿ ನಮ್ಮದಾಗಿರಲಿ. 
ಇತ್ತೀಚಿನ ಗೊಂದಲಗಳು:
ನಮ್ಮ ರಾಜ್ಯದಿಂದ ಪಕ್ಕದ ರಾಜ್ಯಗಳಿಗೆ ಮೀನನ್ನು ಮಾರಾಟ ಮಾಡುವಾಗ ಕೆಲವು ಚೆಕ್ ಪೋಸ್ಟ್ ಗಳಲ್ಲಿ ಮೀನನ್ನು ತಿರಸ್ಕರಿಸುತ್ತಿರುವ ಬಗ್ಗೆ ವರದಿಯಾಗಿದೆ. ಮೀನಿನ ಮಾದರಿಯನ್ನು ಅಧೀಕೃತ ಪ್ರಯೋಗಾಲಯಗಳಾದ ಮೀನುಗಾರಿಕೆ ಮಹಾವಿದ್ಯಾಲಯ, ಭಾರತೀಯ ಮೀನು ತಂತ್ರಜ್ಞಾನ ಸಂಸ್ಥೆ, ಕೊಚ್ಚಿನ್ ಮತ್ತು ಭಾರತೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಅಥವಾ ಯಾವುದೇ ದೃಡೀಕೃತ ಸಂಸ್ಥೆಗಳಿಗೆ ಕಳುಹಿಸಿ ವರದಿ ಪಡೆದು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಅಥವಾ ಈ ಕಿಟ್‍ಗಳನ್ನು ಬಳಸಿ ಪರೀಕ್ಷಿಸಿ ಪ್ರಥಮ ವರದಿಯ ಅಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಕೇವಲ ಅನುಮಾನದ ಮೇಲೆ ಶೀಘ್ರ ಹದಗೆಡುವ ಮೀನನ್ನು ತಡೆಹಿಡಿದು ಭಾರೀ ನಷ್ಟ ಅನುಭವಿಸುವಂತೆ ಮಾಡಬಾರದು. ಇದು ಕೇವಲ ಮೀನುಗಾರರಿಗಷ್ಟೇ ಆಗುವ ನಷ್ಟವಲ್ಲ. ಇದು ಉಭಯ ರಾಜ್ಯಗಳ ರಾಜತಾಂತ್ರಿಕತೆ, ಇತರೆ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿ, ಎರಡು ರಾಜ್ಯಗಳೂ ನಷ್ಟವನ್ನು ಅನುಭವಿಸಬೇಕಾಗುತ್ತದೆ. 
ಈ ಗೊಂದಲಗಳನ್ನು ನಿವಾರಿಸಲು ಮೀನುಗಾರರು, ಮೀನು ಉದ್ದಿಮೆದಾರರು, ಸಂಸ್ಕರಣೆದಾರರು ಮತ್ತು ಚೆಕ್‍ಪೋಸ್ಟ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ, ಪೋಲೀಸ್ ಇಲಾಖೆ, ಟ್ರಕ್ ಮಾಲಕರು, ಚಾಲಕರು ಹೀಗೆ ಎಲ್ಲಾ ಫಲಾನುಭವಿಗಳನ್ನು ಕರೆದು ಅರಿವು ಮೂಡಿಸುವ ಕಾರ್ಯವನ್ನು ಮೀನುಗಾರಿಕೆ ಮಹಾವಿದ್ಯಾಲಯ ಸಧ್ಯದಲ್ಲೇ ಹಮ್ಮಿಕೊಳ್ಳಲಿದೆ. ಅನಗತ್ಯ ವದಂತಿಗಳಿಗೆ ಕಿವಿಗೊಡದೆ, ಗೊಂದಲಗಳಿದ್ದಲ್ಲಿ ಮೀನುಗಾರಿಕೆ ಇಲಾಖೆ, ಮೀನುಗಾರಿಕೆ ಮಹಾವಿದ್ಯಾಲಯಗಳನ್ನು ಸಂಪರ್ಕಿಸಬಹುದು. 

Saturday, January 5, 2019

Why Whales Beach themselves?

Why whales beach themselves?

Why whales beach themselves? It is the usual question that public asks when they see dead whales in their beaches. The question continues until the Municipal Corporation burry the whale or it washed back to the sea, but doubt remains until you see the next whale. This article is written in order to educate the general public on whale beaching.
In science, through research, we can find out possible reasons for many of our doubts by conducting systematic experiments. There are some issues which cannot be researched easily, but based on the available knowledge base, we can predict the causative agents and derive inferences. In case of whales, many field studies have been conducted on their migratory, breeding, feeding behavior and growth pattern. But whale beaching remains still a complex issue.
About whales, you might have seen in televisions or read in books. But, if you continue to know more and more, the exiting world opens. Just born whale weighs around 1-2 t and measures about 12-15 feet. When it attains maturity at the age of 8-10 years, it will reach 35-50 feet with 25-30 t. The tongue of blue whale is as big as an elephant. They live up to 200 years. They feed plankton using baleen plates which are situated below their mouth. But killer whales eat squids, octopus, turtles and other fishes. Once when the bow head whale was dissected, harpoon was found which was used in 1890 war. Bow head whales migrate 10-12 thousand kilo meters in a year for breeding purpose. They attain maturity between 10-12 year of age and they breed once in 2-3 years. The babies drink 200-400 l of milk/day.
Very recently, people of Mangalore region have witnessed dead whales in Ullal, Penambur, Mukka amd Malpe beaches. Though there are records of whale beaching way back in 300 BC, their number is increased in the recent past which is undoubtedly due to human intervention. Even though, there are not many studies on their beaching behavior, based on scientific observations and statistics, there are some logical assumptions. The twelve possible reasons for whale beaching are listed below:
1.     Damage by ships, boats and other instruments: Globally more than 50,000 ships travel across the world. And there are thousands of mechanized boats operate with 200 nautical miles. If the whales met with an accidents during their migration, they may lose balance and reach the shore
2.     Aquatic Pollution: Many industries discharge huge quantity of harmful chemicals. Over 50,400 ships move around internationally. The accidents of crude oil carrying ships and discharge of oils from offshore oil rigs pollute the large are of the sea. To escape the pollution, they travel in an unwilling direction and accidentally they come out of water. Once they come out, they cannot pull themselves back. The sudden change temperature and dehydration become fatal.
3.     Sonar: According some scientists, the man made sonars affects their biological communication and end up in beaches accidentally.
4.     General Diseases: Even whales do have health issues like human beings. During their illness, they lose balance and reach beaches
5.     Fear of other aquatic animals: Sometimes to escape the attack of sharks and other mammals of the sea, they miss the group and travel in wrong direction.
6.     Consumption of Harmful Chemicals: During their filter feeding, whales might consume harmful chemical and other substances and die. The dead ones float to the beaches
7.     Biological Magnetic Field: Based on the biological magnetic field calculation, they migrate in a set pattern in the sea. That’s how the Atlantic Ocean, whales reach Gujarat coast for breeding and the calves migrate back to feeding zone. Sometime due to many human intervention and natural phenomenon, they lose the accuracy and reach wrong destination which shallow and fatal.
8.     Pneumonia: Though whales live in aquatic system they breathe atmospheric air. They gasp the air from the hole on the head region and remain under water for hours. During this process, accidentally if the water gets into lungs, they do suffer from pneumonia disease and die.
9.     Global Warming: Due to global warming and glacier ice melting, the physical and chemical parameters are affected and their feeding and breeding zones are shifted. This might make them to travel in wrong directions
10.  Already Dead Whales: Any dead whales for any reason might end up in beaches. If the cost is far, then they may decompose and sink to bottom.
11.  Loneliness: Whales live in groups. During the migration, the lazy and diseased ones many not match the pace of migration and left behind. When they are left alone, they die of loneliness. Due to poor scientific base, many think that this is a hypothesis; but it cannot be overruled.
12.  The Twelfth and the last reason deadly Human Beings: Though whale killing is banned in the entire world, in some countries, kill whales for food, fun and the liver oil.
Whales Program in India
To protect whales in India, they are many nonprofit organizations working to create awareness among all stakeholders. Everyone have their own guidelines and Whale Protection Acts. The whales from Atlantic Ocean migrate 4000 km and reach Gujarat coast for breeding. In order to protect the whales, Gujarat Government in collaboration with Tata Chemicals, Wild Life Trust of India jointly initiated a Whale protection program. They call them “Valli” means granddaughter. To create awareness among community, street plays, meetings are conducted at regular intervals. Incentives for not killing, giving award and a certificate of appreciation for releasing the whales back into the sea are also part of the program which is appreciated by fishermen community. Any person who reads this article is requested to take few minutes of their time and educate their family and children. Protect whales, protect nature and protect yourself.